SSLC Result 2024 RESULT ಯಾವಾಗ ಬರುತ್ತೆ : ಮೇ 08 ಕ್ಕೆ ಬರುತ್ತಾ?

SSLC ಪರೀಕ್ಷೆ 2024 ರ ಹಿನ್ನಲೆ

SSLC Result 2024 – ಇಡೀ ರಾಜ್ಯವೇ ಕಾಯುತ್ತಿರುವಂತಹ SSLC 2024 ರ ಪರೀಕ್ಷೆಯ Result ಯಾವಾಗ ಬರುತ್ತದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಬಲ್ಲ ಮೂಲಗಳಿಂದ ತಿಳುದು ಬಂದ ಮಾಹಿತಿಯ ಪ್ರಕಾರ ಮೇ 08ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ ಎಂದು ತಿಳಿದಿದ್ದರೂ, ಈಗ ಅದೇ ದಿನದಂದು ಬರುತ್ತದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.ಏಕೆಂದರೆ ಮೇ 07ಕ್ಕೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ ವಿದ್ದು ಇಡೀ ರಾಜ್ಯ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮುಳುಗಿದೆ. ಆದ್ದರಿಂದ ಮೇ 08 ಕ್ಕೆ ಫಲಿತಾಂಶ ಬರುತ್ತದೆಯೇ?

Sslc result 2024

2023-24 ನೇ ಸಾಲಿನ ಕರ್ನಾಟಕ ರಾಜ್ಯದ 10ನೇ ತರಗತಿ ವಿದ್ಯಾರ್ಥಿಗಳ SSLC ಪರೀಕ್ಷೆ 2024 ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿತ್ತು .ಈ ವೇಳಾಪಟ್ಟಿಯ ಪ್ರಕಾರ ದಿನಾಂಕ : 25 ಮಾರ್ಚ್ 2024 ರಿಂದ ದಿನಾಂಕ : 06 ಏಪ್ರಿಲ್ 2024 ರ ವರೆಗೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಪರೀಕ್ಷೆಯನ್ನು ಆಯಾ ವಿಷಯಕ್ಕೆ ಅದೇ ಸಮಯದಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಈಗಾಗಲೇ ಪರೀಕ್ಷೆ ಮುಗಿದು 1 ತಿಂಗಳು ಮುಗಿದಿದೆ. ಇನ್ನೂ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿಲ್ಲ ಎನ್ನುವುದೇ ವಿದ್ಯಾರ್ಥಿಗಳಿಗೆ ಚಿಂತೆ ಯಾವಾಗಿದೆ. ಫಲಿತಾಂಶ ಯಾವಾಗ ಬರಬಹುದು ಎಂದು ತಿಳಿಯಲು ಮುಂದೆ ಓದಿ….

ಪರೀಕ್ಷೆ ನಡೆದ ದಿನಾಂಕ ಗಳು :-
25/03/2024
27/03/2024
30/03/2024
02/04/2024
03/04/2024
04/04/2024
06/04/2024
SSLC ಪರೀಕ್ಷೆಯ ಫಲಿತಾಂಶ ಯಾವಾಗ?- SSLC Result 2024

8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದ ಈ ಪರೀಕ್ಷೆಯ ಫಲಿತಾಂಶ ಎಲ್ಲಾ ವಿದ್ಯಾರ್ಥಿಗಳನ್ನು ಜಾತಕ ಪಕ್ಷಿಯಂತೆ ಕಾಯುವ ಹಾಗೆ ಮಾಡಿದೆ.ಈಗಾಗಲೇ ಹೇಳಿರುವ ಹಾಗೆ ನಾಳೆ ಅಂದರೆ ಮೇ 08 ರಂದು ಪರೀಕ್ಷೆ ಫಲಿತಾಂಶ ಬರುವ ಸಾಧ್ಯತೆ ಬಹಳ ಕಡಿಮೆ ಇದೆ. ಬಹುಷಃ ಮೇ 09 ರಂದು ಬರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಮೇಲೆ ಹೇಳಿರುವಂತೆಯೇ ಕರ್ನಾಟಕದಲ್ಲಿ 2ನೇ ಹಂತದ ಮತದಾನವು ಮೇ 07ರಂದು ನಡೆಯುವುದರಿಂದ ದಿನಾಂಕ ಮೇ 10 ರಂದು ಸರ್ಕಾರಿ ರಜೆ ಇರುವುದರಿಂದ ಮೇ 09 ರಂದೇ ಫಲಿತಾಂಶ ಬರಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ :-KCET 2024 ರ ರಿಸಲ್ಟ್ ಯಾವಾಗ – KEA ಮಾಹಿತಿ.

SSLC ಪರೀಕ್ಷೆಯ ಫಲಿತಾಂಶವನ್ನು CHECK ಮಾಡುವುದು ಹೇಗೆ?

ನೀವು ಈ ಬಾರಿಯ ಪರೀಕ್ಷೆಯ ವಿದ್ಯಾರ್ಥಿ ಯಾಗಿದ್ದಾರೆ ನಿಮ್ಮ ಫಲಿತಾಂಶ ವನ್ನು ನೀವೇ ನಿಮ್ಮ ಮೊಬೈಲ್ ಅಥವಾ desktop ಮೂಲಕ ಹೇಗೆ check ಮಾಡುವುದು ಎಂದು ನೋಡೋಣ.2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ ನಲ್ಲಿ ಅಥವಾ https://karresults.nic.in ವೆಬ್ಸೈಟ್ ಮೂಲಕ ನಿಮ್ಮ ಫಲಿತಾಂಶವನ್ನು check ಮಾಡಿಕೊಳ್ಳ ಬಹುದು. ಮೊದಲನೆಯದಾಗಿ ಅಧಿಕೃತ ಜಾಲತಾಣ (website ) ಗೆ ಭೇಟಿ ನೀಡಿ ಫಲಿತಾಂಶ ವನ್ನು ತಿಳಿಯಬಹುದು. ಹೇಗೆ ಹಂತ ಹಂತ ವಾಗಿ ನೋಡುವುದು ಎಂದು ಕೆಳಗಡೆ ವಿವರಿಸಲಾಗಿದೆ.

SSLC Result 2024 -ಹೇಗೆ ಫಲಿತಾಂಶ ಚೆಕ್ ಮಾಡುವುದು?

  • https://karresults.nic.in ಈ ವೆಬ್ಸೈಟ್ ತೆರೆದು ಕೊಂಡು
  • SSLC 2024 ಫಲಿತಾಂಶ – ಮೇಲೆ CLICK ಮಾಡಿ.
  • ನಿಮ್ಮ Registered Number ಮತ್ತು ಹುಟ್ಟಿದ ದಿನಾಂಕ (Date of Birth )ವನ್ನು ನಮೂದಿಸಿ Submit ಮಾಡಿದರೆ. ನಿಮ್ಮ ಫಲಿತಾಂಶ ತೆರೆ ಮೇಲೆ ತೋರುತ್ತದೆ.

All The Best For Your Result👍🏻