Table of Contents
ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಮತ್ತು ನಗರ ಪ್ರದೇಶದಲ್ಲಿನ ಕರಕುಶಲಗಾರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢಗೊಳಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ(PM VISHWAKARMA YOJANA ) ಯನ್ನು ಜಾರಿಗೋಳಿಸಿದ್ದಾರೆ.
ಹೇಗೆ ಈ ಯೋಜನೆಯ ಸೌಲಭ್ಯ ಪಡೆಯುವುದು? ಹೇಗೆ ಅರ್ಜಿ ಸಲ್ಲಿಸುವುದು? ಮತ್ತು ಯಾವೆಲ್ಲಾ ವೃತ್ತಿಯವರು ಅರ್ಜಿಸಲ್ಲಿಸಲು ಅರ್ಹರು ಎನ್ನುವ ಸಂಪೂರ್ಣ ಮಾಹಿತಿ ಯನ್ನು ಈ ಕೆಳಗೆ ನೀಡಲಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ (PM VISHWAKARMA YOJANA )
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ PM Vishwakarma Yojana ಯ ಮುಖ್ಯ ಉದ್ದೇಶ ದೇಶದಲ್ಲಿರುವ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ 18 ವರ್ಗಗಳ ಕುಶಲಕರ್ಮಿಗಳಿಗೆ ತಮ್ಮ ವೃತ್ತಿಯಲ್ಲಿನ ಕೌಶಲ್ಯ ವೃದ್ಧಿಗೆ ತರಬೇತಿ, ತಾಂತ್ರಿಕ ಜ್ಞಾನದ ಜೊತೆಗೆ ಆಧಾರ ರಹಿತವಾಗಿ ಸಾಲ ಸೌಲಭ್ಯ ನೀಡುವುದಾಗಿದ್ದು, ತಾವು ಉತ್ಪಾದಿಸಿರುವ ಉತ್ಪನ್ನವನ್ನು ಮಾರಾಟ ಮಾಡಲು ಮಾರುಕಟ್ಟೆ ಸೌಲಭ್ಯವನ್ನು ದೇಶ – ವಿದೇಶ ಗಳಲ್ಲಿ ಒದಗಿಸಲು ನೆರವು ನೀಡುವುದಾಗಿದೆ.
ಈ ಯೋಜನೆಯ ನೋಡಲ್ ಏಜೆನ್ಸಿಯಾಗಿ MSME ಸಚಿವಾಲಯವು ಕಾರ್ಯ ನಿರ್ವಹಿಸುತ್ತದೆ.
ಕರ್ನಾಟಕದಲ್ಲಿನ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು ಅಗತ್ಯ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.ಯಾವೆಲ್ಲ ದಾಖಲಾತಿಗಳು ಬೇಕು ಎಂಬ ಮಾಹಿತಿ ಕೆಳಗೆ ನೀಡಲಾಗಿದೆ. ಮುಂದೆ ಓದಿ…
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು
- ಅರ್ಹ ಕುಶಲಕರ್ಮಿಯ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ( ಆಧಾರ್ ಜೋಡಣೆ ಯಾಗಿರಬೇಕು )
- ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್
- ರೇಷನ್ ಕಾರ್ಡ್
ಇದನ್ನೂ ಓದಿ :- ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.
ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬಹುದು?
ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ CSC ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಮೊದಲು ದಾಖಲಾತಿಯಲ್ಲಿನ ಎಲ್ಲಾ ಮಾಹಿತಿ ಮತ್ತು ದತ್ತಾಂಶ (Data ) ಸರಿಯಾಗಿ ಇದೆಯೇ? ಎನ್ನುವುದನ್ನ ನೋಡಿಕೊಳ್ಳುವುದು. ಏಕೆಂದರೆ ತಪ್ಪಿದ್ದಲ್ಲಿ ನಿಮ್ಮ ಅರ್ಜಿ ತಿರಸ್ಕರಿಸಲ್ಪಡುವುದರಿಂದ ಜಾಗರೂಕತೆ ವಹಿಸುವುದು ಅತಿ ಮುಖ್ಯ.
ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆಯೇನು?
- ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿ ಈ ಕೆಳಗೆ ಹೇಳಿರುವ 18 ವರ್ಗಗಳ ವೃತ್ತಿಯಲ್ಲಿ ಯಾವುದಾದರೊಂದು ವೃತ್ತಿಯನ್ನು ಮಾಡುತ್ತಿರಬೇಕು.
- ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
- ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅರ್ಜಿ ಸಲ್ಲಿಸಬಹುದು.
- ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ಕೆಲಸ (Government Job) ದಲ್ಲಿರಬಾರದು.
- ಇತರೆ
ಯಾವೆಲ್ಲಾ 18 ವರ್ಗಗಳು ಈ ಯೋಜನೆಗೆ ಅರ್ಹ
- ಮರದ ಕೆಲಸ ಮಾಡುವವರು
- ವಿಗ್ರಹ (ಶಿಲ್ಪ ) ತಯಾರುಮಾಡುವವರು
- ಗಾರೆ ಕೆಲಸ ಮಾಡುವವರು
- ಅಕ್ಕ ಸಾಲಿಗ
- ಕ್ಷೌರಿಕರು
- ಬುಟ್ಟಿ, ಚಾಪೆ ಮತ್ತು ಕಸ ಪೊರಕೆ ತಯಾರು ಮಾಡುವವರು
- ಟೈಲರ್
- ಅಗಸರು
- ದೋಣಿ ತಯಾರಕರು
- ಆಯುಧ ತಯಾರಕರು
- ಚಮ್ಮಾರ
- ಬೀಗ ತಯಾರಕರು
- ಸುತ್ತಿಗೆ ಮತ್ತು ಉಪಕರಣ ತಯಾರಕರು
- ಕುಂಬಾರರು
- ಕಮ್ಮಾರರು
- ಹೂವಿನ ಹಾರ ತಯಾರಕರು
- ಮೀನು ಬಲೆ ತಯಾರಕರು
- ಆಟಿಕೆ ತಯಾರಕರು (ಸಾಂಪ್ರದಾಯಕ )
ಈ ಮೇಲಿನ 18 ವರ್ಗಗಳಲ್ಲಿ ವೃತ್ತಿ ಮಾಡುತ್ತಿರುವ ವ್ಯಕ್ತಿ ವಿಶ್ವಕರ್ಮ ಯೋಜನೆಯ (PM VISHWAKARMA YOJANA ) ಸಾಲ ಸೌಲಭ್ಯವನ್ನು ಪಡೆದು ಕೊಳ್ಳಬಹುದು.
ಇದನ್ನೂ ಓದಿ :- ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.
ಇದನ್ನೂ ಓದಿ :- ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು
ವಿಶ್ವಕರ್ಮ ಯೋಜನೆಯಿಂದ ಆಗುವ ಪ್ರಯೋಜನಗಳು
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ ವ್ಯಕ್ತಿವು 3 ಲಕ್ಷ ರೂ. ಗಳ ಆಧಾರ ರಹಿತವಾಗಿ (ಯಾವುದೇ ಅಡಮಾನವಿಲ್ಲದೆ ) ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು.
- ಕೌಶಲ್ಯಭಿವೃದ್ಧಿಗೆ 5-7 ದಿನಗಳ ಕಾಲ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ ಮತ್ತು ದಿನಕ್ಕೆ 500ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
- ಹಾಗೆಯೇ 15 ಸಾವಿರ ರೂ. ಗಳ ಟೂಲ್ ಕಿಟ್ ಅನ್ನು ನೀಡಲಾಗುತ್ತದೆ.ಮತ್ತು ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.
- ಮೊದಲ ಬಾರಿಗೆ 1 ಲಕ್ಷ ರೂ ಸಾಲವನ್ನು ಶೇ.5 ರ ಬಡ್ಡಿ ದರಕ್ಕೆ ನೀಡಲಾಗುತ್ತದೆ.18 ತಿಂಗಳ ಕಾಲ ಸಮಯವಕಾಶದಲ್ಲಿ ಸರಿಯಾಗಿ ಮರುಪಾವತಿ ಮಾಡಬೇಕು. ನಂತರ 2 ಲಕ್ಷ ರೂ. ಗಳ ಸಾಲವನ್ನು 30 ತಿಂಗಳಗಳ ಸಮಯವಕಾಶ ನೀಡಲಾಗುತ್ತದೆ.
ಸಾಲ ಯಾರು ನೀಡುತ್ತಾರೆ?
ಅರ್ಜಿ ಸಲ್ಲಿಸಿದ ವ್ಯಕ್ತಿಯ ಅರ್ಜಿಯು ಅನುಮೋದನೆ ಗೊಂಡು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹವಾದ ವ್ಯಕ್ತಿಯು ಈ ಯೋಜನೆಯಡಿ ಸಾಲ ಸೌಲಭ್ಯವನ್ನು ಪಡೆಯಲು ಅರ್ಹನಾಗುತ್ತಾನೆ.
ಮುಖ್ಯವಾಗಿ ಸಾಲವನ್ನು ದೇಶದಲ್ಲಿನ ವಾಣಿಜ್ಯ ಬ್ಯಾಂಕ್ ಗಳು, ಪ್ರಾದೇಶಿಕ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳು ಹಾಗೂ ಇತರೆ ಸಂಸ್ಥೆಗಳಿಂದ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ, ಪರಿಶೀಲನೆ ಹಾಗೂ ಏನಾದರೂ ಸಂದೇಹಗಳಿದ್ದರೆ ಪಿಎಂ ವಿಶ್ವಕರ್ಮ (PM VISHWAKARMA YOJANA )ವೆಬ್ಸೈಟ್ ಆದ pmvishwakarma.gov.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಇದನ್ನೂ ಓದಿ :- ಹಿಂದಿನ ವರ್ಷದ(2022-23) Labour Card Scholarship Status ತಿಳಿದುಕೊಳ್ಳುವುದು ಹೇಗೆ?