PDO Recruitment 2024 – PDO ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ?

ಮುಖ್ಯಾಂಶಗಳು

ಈ ಕೆಳಗಿನ ಎಲ್ಲಾ ಅಂಶಗಳು ಒಳಗೊಂಡಿದೆ.

1.ಪ್ರಶ್ನೆ ಪತ್ರಿಕೆ ಹೇಗಿರಲಿದೆ?

2.ಯಾವ ವಿಷಯವನ್ನು ಹೆಚ್ಚಿಗೆ ಓದಬೇಕು?

3.ಪತ್ರಿಕೆ 2 ರಲ್ಲಿ ಹೆಚ್ಚಿನ ಅಂಕಗಳಿಸಿಕೊಳ್ಳುವುದು ಹೇಗೆ?

4. VAO ಪ್ರಶ್ನೆ ಪತ್ರಿಕೆಯಿಂದ PDO ಪರೀಕ್ಷೆಗೆ ಏನನ್ನು ಕಲಿಯಬೇಕಿದೆ?

ಈ ಬಾರಿಯ ಹೊಸ ನೇಮಕಾತಿ ‘ PDO Recruitment 2024 ‘ ಹೊಸ ರೀತಿಯಲ್ಲಿ ಹೊಸ ಪಠ್ಯಕ್ರಮ ಮಾದರಿಯಲ್ಲಿ ಹಾಗೂ ಮೊದಲ ಬಾರಿಗೆ KPSC ನಡೆಸಿ ಕೊಡುತ್ತಿರುವದರಿಂದ ಎಲ್ಲವು ಹೊಸದಾಗಿಯೇ ಕಾಣುವುದು ಸಹಜ.

ಹಾಗೆಯೇ ಅಭ್ಯರ್ಥಿಗಳಿಗೆ ಹೇಗೆ ಓದಬೇಕು? ಎಷ್ಟು ಓದಬೇಕು? ಮತ್ತು ಯಾವ ವಿಷಯಕ್ಕೆ ಹೆಚ್ಚು ಒತ್ತು ನೀಡಬೇಕು? ಎಂಬೆಲ್ಲ ಪ್ರಶ್ನೆ ಮೂಡುತ್ತಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೆಂಬತೆ ಈ Article ನಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಮುಂದೆ ಓದಿ….

ಪ್ರಶ್ನೆ ಪತ್ರಿಕೆ ಹೇಗಿರಲಿದೆ?

ಮೊದಲ ಬಾರಿಗೆ  ಈ ಪರೀಕ್ಷೆಯನ್ನು KPSC ನಡೆಸುತ್ತಿರುವುರಿಂದ ಪ್ರಶ್ನೆ ಪತ್ರಿಕೆ ಹೇಗಿರಲಿದೆ?    

ನಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ PDO syllabus (ಪಠ್ಯಕ್ರಮ ) ಹೊಸದಾಗಿ ಪರಿಚಯಿಸಲಾಗಿದ್ದೂ, ಈ ಪಠ್ಯಕ್ರಮವು ಗ್ರೂಪ್ ಸಿ ಪಠ್ಯಕ್ರಮವನ್ನೇ ಹೋಲುತ್ತಿರುವುದರಿಂದ ಗ್ರೂಪ್ ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿಯೇ ಈ ಬಾರಿ PDO Exam ಅನ್ನು ನಡೆಸಲಾಗುತ್ತದೆ.

ಹಾಗೆಯೇ ಈ ಪ್ರಶ್ನೆ ಪತ್ರಿಕೆಯು KPSC ಸಿದ್ದಪಡಿಸುವುದರಿಂದ ಸಹಜವಾಗಿಯೇ ಪ್ರಶ್ನೆ ಪತ್ರಿಕೆ ಕಠಿಣತೆ ಇಂದ ಕೂಡಿರುತ್ತದೆ.ಹಿಂದಿನ ಬಾರಿಯ syllabus ಅನ್ನು ನೋಡಿದರೆ Paper -2 ಪೂರ್ಣ ಪ್ರಮಾಣದಲ್ಲಿ , RDPR Act ಅನ್ನು ಒಳಗೊಂಡಿದ್ದವು,ಇದರಿಂದ ಒಂದೇ ವಿಷಯವನ್ನು ಸರಿಯಾಗಿ ಓದಿಕೊಂಡರೆ ಹೆಚ್ಚಿನ ಅಂಕ ಪಡೆಯುವಲ್ಲಿ ಸಹಕಾರಿಯಾಗುತ್ತಿದ್ದವು ಆದರೆ ಈ ಬಾರಿ PAPER 2 ಸಾಮಾನ್ಯ ಕನ್ನಡ (35), ಸಾಮಾನ್ಯ ಇಂಗ್ಲಿಷ್ (35) ಮತ್ತು ಕಂಪ್ಯೂಟರ್ (30) ವಿಷಯವನ್ನು ಒಳಗೊಂಡಿರುವುದರಿಂದ ಅಂಕ ಗಳಿಸುವಲ್ಲಿ ಹೆಚ್ಚಿನ ವಿಷಯವನ್ನು ಓದಿಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ಹೆಚ್ಚಿನ ಅಂಕವನ್ನು ಗಳಿಸಲು ಬಹುದಾಗಿದೆ.

ಅಂತೆಯೇ ಪದವಿ (Degree) ವಿದ್ಯಾರ್ಹತೆಯ ಪರೀಕ್ಷೆ ಇದಾಗಿರುವುದರಿಂದ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಗುಣಮಟ್ಟ ಹೆಚ್ಚಿರುತ್ತದೆ. ಇದಕ್ಕೆ ಆಳವಾದ ವಿಷಯ ಜ್ಞಾನ ಹೊಂದುವುದು ಅವಶ್ಯಕ. ಮತ್ತು ಈಗಿನ ಪರೀಕ್ಷೆಯ ಸ್ಪರ್ಧೆ ಮಟ್ಟ ಹೆಚ್ಚಿರುವುದರಿಂದ ಅದನ್ನು ಸರಿದೂಗಿಸಲು ಪ್ರಶ್ನೆ ಪತ್ರಿಕೆಯನ್ನು ಕಠಿಣವಾಗಿ ತೆಗೆಯುವುದು ಅನಿವಾರ್ಯವಾಗಿರುತ್ತದೆ.

ಯಾವ ವಿಷಯವನ್ನು ಹೆಚ್ಚಿಗೆ ಓದಬೇಕು?

ಆಗಲೇ ಹೇಳಿರುವ ಹಾಗೆ ಈ ಬಾರಿಯ ಪಠ್ಯಕ್ರಮವು ಹೆಚ್ಚಿನ ವಿಷಯವನ್ನು ಒಳಗೊಂಡಿರುವುದರಿಂದ ಆ ಎಲ್ಲಾ ವಿಷಯವನ್ನು ಓದಿಕೊಳ್ಳಬೇಕಿದೆ ಹಾಗೆಯೇ ಅದನ್ನು ಸರಿಯಾಗಿ ಪುನರ್ಮನನ ಮಾಡುವುದು ಅವಶ್ಯಕವಾಗಿದೆ. ಯಾವ ವಿಷಯ ಓದುವುದು ಅನ್ನುವುದಕ್ಕಿಂತ ಪಠ್ಯಕ್ರಮದ ಯಾವೆಲ್ಲಾ ವಿಷಯವನ್ನು Cover ಮಾಡಿರುವೆ ಅನ್ನುವುದು ಮುಖ್ಯ.ಏಕೆಂದರೆ ಪ್ರಶ್ನೆಗಳು ಪಠ್ಯಕ್ರಮದ ಮೇಲೆಯೇ ಸಿದ್ಧಗೊಳ್ಳುವುದರಿಂದ Syllabus ನಲ್ಲಿನ ಅಷ್ಟು ವಿಷಯ ವನ್ನು ಓದಿಕೊಳ್ಳುವುದು ಅತಿ ಮುಖ್ಯ….

PDO RECRUITMENT 2024

ಹಿಂದಿನ ಬಾರಿಯ ಗ್ರೂಪ್ ಸಿ ಪ್ರಶ್ನೆ ಪತ್ರಿಕೆ ಈ ಬಾರಿಯ PDO exam ಗೆ ಮಾರ್ಗದರ್ಶಿ ಇದ್ದಂತೆ.ಅದನ್ನು ಅರಿತು Syllabus Cover ಮಾಡಿಕೊಳ್ಳುವುದರಿಂದ ಹೆಚ್ಚಿನ ಅಂಕವನ್ನು ಪಡೆದುಕೊಳ್ಳಬಹುದು.ಅದರ ಜೊತೆಗೆ ಸದ್ಯ ನಡೆದ KPSC ಮತ್ತು KEA ಪದವಿ ಮಟ್ಟದ ಇತರೆ ಪರೀಕ್ಷೆ ಯ ಪ್ರಶ್ನೆ ಪತ್ರಿಕೆ ಪ್ರವೃತ್ತಿ (Trend) ವಿಶ್ಲೇಷಣೆ ಮಾಡಿ ನಿಮ್ಮ ಅಧ್ಯಯನ ಮಟ್ಟವನ್ನು ತಾಳೆ ನೋಡಿ.ಇದರಿಂದ ನಿಮ್ಮ ಅಧ್ಯಯನ ಎಷ್ಟರ ಮಟ್ಟಿಗೆ ಇದೆ ಎನ್ನುವುದು ನಿಮಗೆ ತಿಳಿಯುತ್ತದೆ.

ಹಾಗೆಯೇ ಈಗಿನ ಎಲ್ಲಾ ಪರೀಕ್ಷೆ ಹಾಗೂ PDO syllabus ನೋಡಿದರೆ, ಈ ಪಠ್ಯಕ್ರಮವನ್ನು 2 ರೀತಿಯಾಗಿ ವಿಂಗಡಿಸಬಹುದು.

1. ದೊಡ್ಡದಾದ ಮತ್ತು ಮುಖ್ಯವಾದ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಹೆಚ್ಚಿನ ಅಂಕ ಗಳಿಸುದು.

2. ಕಡಿಮೆ ವಿಷಯವನ್ನು ಆಳವಾಗಿ ಓದಿ ಒಳ್ಳೆಯ ಅಂಕ ಗಳಿಸವುದು.

ಯಾವೆಲ್ಲಾ ವಿಷಯ ಎನ್ನುವುದನ್ನು ವಿವರಿಸಲಾಗಿದೆ.

ಮುಖ್ಯವಾದ ವಿಷಯದ ಬಗ್ಗೆ ಹೆಚ್ಚಿನ ಗಮನ ಕೊಡಿ.

ಇತ್ತೀಚಿನ ಸುಮಾರು ಎಲ್ಲಾ ಪರೀಕ್ಷೆಗಳಲ್ಲಿ ಈ ಕೆಳಗಿನ ವಿಷಯಗಳಿಂದ ಹೆಚ್ಚಿಗಿನ ಅಂಕದ ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳೆಂದರೆ

ಇತಿಹಾಸ

ಭೂಗೋಳ

ಸಂವಿಧಾನ

ಸೈನ್ಸ್ & ಟೆಕ್

ಮಾನಸಿಕ ಸಾಮರ್ಥ್ಯ

Current affairs

ಈ ಎಲ್ಲಾ ವಿಷಯಕ್ಕೆ ಹೆಚ್ಚಿಗಿನ ಓದು ಮತ್ತು ಅಧ್ಯಯನ ಅವಶ್ಯಕ ಇದರಿಂದ ಅಂಕವನ್ನು ಹೆಚ್ಚಿಸಿಕೊಳ್ಳಬಹುದು.ಅಂಕವನ್ನು ಹೆಚ್ಚಿಗೆ ಗಳಿಸಬೇಕು ಎಂದಾದರೆ ಪಠ್ಯಕ್ರಮದಲ್ಲಿನ ಪ್ರತಿ ವಿಷಯದ ಆಳ ಅಗಲ ತಿಳಿದುಕೊಳ್ಳಬೇಕು. ಇದರಿಂದ ಪರೀಕ್ಷೆ ಕೇಂದ್ರದಲ್ಲಿ ಯಾವುದೇ ಭಯವಿಲ್ಲದೆ ಪರೀಕ್ಷೆಯನ್ನು ತೆಗೆದು ಕೊಳ್ಳಬಹುದು..

ಕಡಿಮೆ ಓದಿನೊಂದಿಗೆ ಅಂಕ ಗಳಿಸಿಕೊಳ್ಳುವ ವಿಷಯಗಳು

1. RDPR :- ಈ ವಿಷಯದಲ್ಲಿ ಎಲ್ಲಾ ಓದುವ ಅವಶ್ಯಕತೆ ಇಲ್ಲಾ, ಮುಖ್ಯ ಅಂಶಗಳನ್ನು ಓದಿಕೊಂಡರೆ ಸಾಕು. ಉದಾ :- ಪಂಚಾಯತ್ ರಾಜ್ ಇತಿಹಾಸ,ಸಮಿತಿಗಳು ಮತ್ತು ಮುಖ್ಯವಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನ ಅಧ್ಯಾಯ ಮತ್ತು ಪ್ರಕರಣ ಇತ್ಯಾದಿಗಳನ್ನು ನೋಡಿಕೊಳ್ಳುವುದು.

2.ಗ್ರಾಮೀಣ ಸಹಕಾರ ಸಂಸ್ಥೆ :- ಸಹಕಾರ ಸಂಸ್ಥೆ, ವ್ಯಾಖ್ಯಾನ, ಇತಿಹಾಸ ಹಾಗೂ ಸಹಕಾರ ಚಳುವಳಿ ಇತರೆ ಮುಖ್ಯ ಅಂಶಗಳನ್ನು ಓದಿಕೊಳ್ಳುವುದು.ಗ್ರಾಮೀಣ ಭಾಗದ ಸಹಕಾರ ಸಂಸ್ಥೆ ಗಳ ಬಗ್ಗೆ ಹೆಚ್ಚಿನ ಒತ್ತು ನೀಡುವುದು..

3.ಪರಿಸರ ಸಂಬಂಧಿಸಿದ ಸಮಸ್ಯೆ ಮತ್ತು ಅಭಿವೃದ್ಧಿ :- ಇದರಲ್ಲಿ ಪರಿಸರದ ಸಂಬಂಧಿಸಿದ ಎಲ್ಲಾ ಆಯಾಮದ ಪ್ರಶ್ನೆ ಗಳನ್ನು ನಿರೀಕ್ಷಿಸಬಹುದು ಮುಖ್ಯವಾಗಿ ಪರಿಸರ ಚಳುವಳಿ, ಪರಿಸರ ಕ್ಕೆ ಸಂಬಂಧಿಸಿದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಪರಿಸರಕ್ಕೆ ಸಂಬಂಧಿಸಿದ ಪ್ರಚಲಿತ ವಿಷಯಗಳನ್ನು ನೋಡಿಕೊಳ್ಳುವುದು.

4.ಆಡಳಿತ (Administration) :- PDO ಹುದ್ದೆ ಒಂದು ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯಾಗಿರುವುದರಿಂದ ಸರ್ಕಾರಿ ಕಛೇರಿ ಮತ್ತು ಇತರೆ ಆಡಳಿತದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ.ಮುಖ್ಯವಾಗಿ ಇ -ಆಡಳಿತ ಮತ್ತು ತಂತ್ರಾಂಶಗಳ ಬಗ್ಗೆ ಮಾಹಿತಿ ಹೊಂದಿರುವುದು.

5.ಭೂ ಸುಧಾರಣೆ :- Land Reform ನ ಬಗ್ಗೆ ಮುಖ್ಯವಾದ ಅಂಶಗಳು ಮತ್ತು ಮುಖ್ಯ ಕಾಯ್ದೆಯ ಇತರೆ ಅಂಶಗಳನ್ನು ಓದಿಕೊಳ್ಳುವುದು.ಈ ವಿಭಾಗವು ಕಡಿಮೆ ವಿಷಯವನ್ನು ಒಳಗೊಂಡಿದ್ದು ಮುಖ್ಯವಾದ ಅಂಶಗಳನ್ನು ಓದಿಕೊಳ್ಳುವುದರ ಮೂಲಕ ಒಳ್ಳೆಯ ಅಂಕ ಗಳಿಸಬಹುದು.

6. ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳು :- ಕರ್ನಾಟಕ ಕಲೆ ಮತ್ತು ಸಂಸ್ಕೃತಿ ಬಗ್ಗೆ ಹಾಗೂ ಇತರೆ ಅಂಶಗಳನ್ನು ಒಳಗೊಂಡ ಕರ್ನಾಟಕಕ್ಕೆ ಪ್ರಾಮುಖ್ಯತೆ ಪಡೆದ ವಿಷಯ ಗಳನ್ನು ಓದಿಕೊಳ್ಳುವುದು.

ಇದನ್ನೂ ಓದಿ :-Student Bus Pass: 2024-25 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಆಹ್ವಾನ -ಹೀಗೆ ಅರ್ಜಿ ಸಲ್ಲಿಸಿ.

ಇದನ್ನೂ ಓದಿ :- ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಪತ್ರಿಕೆ 2 ರಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ?

ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪತ್ರಿಕೆ 2 ರ ಅಂಕ ಮುಖ್ಯ ಪಾತ್ರವಹಿಸುತ್ತದೆ. ಪತ್ರಿಕೆ 2 ಹೆಚ್ಚಿಗೆ ಅಂಕಗಳಿಸಿ ಕೊಡಲು ಸಹಕಾರಿಯಾಗುತ್ತದೆ. ಕನ್ನಡ ವಿಭಾಗದಲ್ಲಿ ವ್ಯಾಕರಣ ಕ್ಕೆ ಮಾತ್ರ ಹೆಚ್ಚಿಗೆ ಒತ್ತು ಕೊಡದೆ, ಸಾಹಿತ್ಯ ವಿಭಾಗವನ್ನು ಓದಿಕೊಳ್ಳಬೇಕು ಆಗ ಮಾತ್ರ ಕನ್ನಡದಲ್ಲಿ ಹೆಚ್ಚಿಗೆ ಅಂಕ ಪಡೆಯ ಬಹುದು.. ಹಾಗೆಯೇ English ವಿಭಾಗದಲ್ಲಿ ಒಂದೇ ತರನಾದ ಪ್ರಶ್ನೆ ಬಂದರು ಸಹ ಅದರಲ್ಲಿಯೇ ಬೇರೆ ಬೇರೆ ನಿಯಮವನ್ನು ಆದಾರವಾಗಿಟ್ಟುಕೊಂಡು ಪ್ರಶ್ನೆ ಕೇಳುತ್ತಾರೆ, ಅದರ ಬಗ್ಗೆ ಹೆಚ್ಚಿಗೆ ಗಮನ ಕೊಡಬೇಕು. ಮತ್ತು ಕಂಪ್ಯೂಟರ್ ವಿಭಾಗದಲ್ಲಿ Basic ಮತ್ತು History of Computer ಮಾತ್ರ ಓದಿಕೊಳ್ಳದೆ, ಡಾಟಾಬೇಸ್ ನೆಟ್ವರ್ಕ್ , ಲ್ಯಾಂಗ್ವೇಜ್ ಹಾಗೆ ಇತರೆ ಕಂಪ್ಯೂಟರ್ ವಿಷಯವನ್ನು ಓದಿಕೊಳ್ಳಬೇಕು.

PDO ಪರೀಕ್ಷೆ

VAO ಪ್ರಶ್ನೆ ಪತ್ರಿಕೆ ಯಿಂದ PDO ಪರೀಕ್ಷೆಗೆ ಹೇಗೆ ಸಹಕಾರಿ?

VAO ಪರೀಕ್ಷೆಯಲ್ಲಿ ಪತ್ರಿಕೆ -1 ಮತ್ತು ಪತ್ರಿಕೆ -2 ರಲ್ಲಿ ಪ್ರಶ್ನೆಗಳ ಗುಣಮಟ್ಟ ಹೆಚ್ಚಿರುವುದು ನೋಡಬಹುದು. ಅದೇ ರೀತಿಯಾಗಿ PDO ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಇದರಿಂದ ತಿಳಿಯಬಹುದು.

VAO ಪ್ರಶ್ನೆ ಪತ್ರಿಕೆಯಲ್ಲಿ ಪತ್ರಿಕೆ -1 ಯು ಮಧ್ಯಮ ಗುಣಮಟ್ಟದ ಪತ್ರಿಕೆ ಯಾಗಿದ್ದವು ಮತ್ತು ಪತ್ರಿಕೆ -2 ರಲ್ಲಿ ಪ್ರಶ್ನೆಯ ಗುಣಮಟ್ಟ ಕಠಿಣತೆಯಿಂದ ಕುಡಿತ್ತು ಎಂದು ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಹೇಳುತ್ತಾರೆ. ಹಾಗೆಯೇ ಪತ್ರಿಕೆ -2 ರಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ನ ಪ್ರಶ್ನೆಯು ಈ ಹಿಂದಿನ ಎಲ್ಲಾ ಪರೀಕ್ಷೆಯ ಕಠಿಣತೆಯ ಮಟ್ಟವನ್ನು ಮೀರಿ ಪ್ರಶ್ನೆಗಳು ಬಂದಿದ್ದವು ಎಂದು ಅಭ್ಯರ್ಥಿಗಳು ತಮ್ಮ ಪರೀಕ್ಷಾ ಅನುಭವವನ್ನು ಹೇಳಿಕೊಂಡರು.

ಇದರಿಂದ PDO ಪರೀಕ್ಷೆಯಲ್ಲಿ ಪತ್ರಿಕೆ -2 ರಲ್ಲಿ ಹೆಚ್ಚಿಗಿನ ಅಂಕ ಗಳಿಸಿಕೊಳ್ಳಲು ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಭಾಗದಲ್ಲಿ ಆಳವಾಗಿ ಅಧ್ಯಯನ ಅತ್ಯವಶ್ಯಕವಾಗಿದೆ.

PDO ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೇಗೆ?

ಕೊನೆಯ ಹಂತದಲ್ಲಿ ಅಭ್ಯರ್ಥಿಗಳು ಹೊಸ ವಿಷಯವನ್ನು ಓದುವುದಕ್ಕಿಂತ ಓದಿರುವ ವಿಷಯವನ್ನೇ ಪುನರ್ಮನನ ಮಾಡಿಕೊಳ್ಳುವುದು ಹೆಚ್ಚು ಸೂಕ್ತ,ಹೊಸ ವಿಷಯವನ್ನು ಓದುವುದರಿಂದ ಯಾವ ವಿಷಯವನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಲು ಸಮಯ ಸಾಲುವುದಿಲ್ಲ, ಹಾಗಾಗಿ ಹೆಚ್ಚಿಗೆ ಅಂಕ ಬರುವ ವಿಷಯವನ್ನು ಪಟ್ಟಿ ಮಾಡಿ ಅದನ್ನೇ ಹೆಚ್ಚಿಗೆ ಪುನರ್ಮನನ ಮಾಡಿದರೆ ಪರೀಕ್ಷೆಯಲ್ಲಿ ಗೊತ್ತಿರು ಪ್ರಶ್ನೆಯನ್ನು ತಪ್ಪು ಮಾಡುವುದು ನಿಲ್ಲುತ್ತದೆ.ಹಾಗೆಯೇ ಈ PDO Exam ಅನ್ನು ಆತ್ಮ ವಿಶ್ವಾಸದಿಂದ ಎದುರಿಸಲು ಸಹಕಾರಿಯಾಗುತ್ತದೆ.

PDO HK ಪ್ರವೇಶ ಪತ್ರ( HALL TICKET ) ಬಿಡಲಾಗಿದೆ.

PDO ಪರೀಕ್ಷೆ ದಿನಾಂಕ (PDO EXAM DATE ) ಸನಿಹವಾಗುತ್ತಿದೆ, ಹಾಗೆಯೇ KPSC ವತಿಯಿಂದ HK ವೃಂದ ಅಭ್ಯರ್ಥಿಗಳ ಪ್ರವೇಶ ಪತ್ರ (Hall Ticket ಬಿಡಲಾಗಿದೆ. ಅಭ್ಯರ್ಥಿಗಳು KPSC ಯ ಅಧಿಕೃತ (Official )ವೆಬ್ಸೈಟ್ ಗೆ ಭೇಟಿ ನೀಡಿ. ಹೊಸದು ಏನು? (What is New) ನಲ್ಲಿ ಪ್ರವೇಶ ಪತ್ರ ಬಿಡಲಾಗಿರುವ ಮಾಹಿತಿ ತೋರಿಸಲ್ಪಾಡುತ್ತದೆ.ಆ ಮೂಲಕ ತಮ್ಮ ಇತರೆ ಮಾಹಿತಿಗಳಾದ Rigister Number ಹಾಗೂ ಇತರೆ ಮಾಹಿತಿ ನೀಡಿ ಪ್ರವೇಶ ಪತ್ರವನ್ನು Download ಮಾಡಿಕೊಳ್ಳಬಹುದು…

ಪ್ರವೇಶ ಪತ್ರ Download ಮಾಡಿಕೊಳ್ಳುವುದು ಹೇಗೆ?

Step By Step :-

1. KPSC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://kpsc.kar.nic.in/

2. ಮುಖ್ಯ ಪುಟದಲ್ಲಿ ಹೊಸದು ಏನು? ನಲ್ಲಿ DOWNLOAD ಮಾಡಿಕೊಳ್ಳುವ ಲಿಂಕ್ ನೀಡಲಾಗಿದೆ.

3. ಅದರ ಮೇಲೆ ಕ್ಲಿಕ್ ಮಾಡಿ, ನಂತರ ಮತ್ತೊಂದು ಪುಟ ತೆರೆಯುತ್ತದೆ.

4. ನಂತರ ನಿಮ್ಮ ಅಗತ್ಯ ರಿಜಿಸ್ಟರ್ ನಂಬರ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ ಪ್ರವೇಶ ಪತ್ರವನ್ನು DOWNLOAD ಮಾಡಿಕೊಳ್ಳಬಹುದು.

PDO EXAM DATE

ಹಾಗೆಯೇ ಆ ಪ್ರವೇಶ ಪತ್ರದಲ್ಲಿನ ಎಲ್ಲಾ ನಿಮ್ಮ ಮಾಹಿತಿಯನ್ನು ನೋಡಿಕೊಳ್ಳುವುದು ಮತ್ತು ಸೂಚನೆಗಳನ್ನು ಓದಿಕೊಂಡು ಹಾಗೆಯೇ ಪರೀಕ್ಷೆಯಲ್ಲಿ ಪಾಲಿಸುವುದು

ಇದನ್ನೂ ಓದಿ :-ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.

ಇದನ್ನೂ ಓದಿ :-ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು

ಇದನ್ನೂ ಓದಿ :- ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ. ಹಣ ಬಂದಿರುವುದು ಹೀಗೆ ಚೆಕ್ ಮಾಡಿ.