KCET 2024 ಫಲಿತಾಂಶ ಪ್ರಕಟ – ಹೀಗೆ ಚೆಕ್ ಮಾಡಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KCET 2024 ರ ಪರೀಕ್ಷೆಯನ್ನು ನಡೆಸಿತ್ತು,2023-24 ನೇ ಸಾಲಿನ ಇಂಜಿನಿಯರ್, Bsc ಅಗ್ರಿಕಲ್ಚರ್, Bsc ಫಾರೆಸ್ಟ್ರಿ, ವೆಟರಿನರಿ,ಆರ್ಕಿಟೆಕ್ಚರ್ ಮತ್ತು ಬಿ ಫಾರ್ಮ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ.

2023-24 ನೇ ಸಾಲಿನ UGCET 2024 ರ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18,19 ಮತ್ತು 20 ದಂದು ರಾಜ್ಯಾದ್ಯಂತ ಪರೀಕ್ಷೆಯನ್ನು ನಡೆಸಿತ್ತು.ಈ ಪರೀಕ್ಷೆಗೆ ಸುಮಾರು 3.28 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

KCET 2024

KCET 2024 ರ ಫಲಿತಾಂಶವನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಬರುವ ನೀರಿಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಅಚ್ಚರಿ ಎಂಬಂತೆ KEA ಯು ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ನಲ್ಲಿ ನೋಡಿಕೊಳ್ಳಬಹುದು.

ಈ ಫಲಿತಾಂಶಕ್ಕೆ ಯಾವ ಅಂಕಗಳನ್ನು ಪರಿಗಣಿಸುತ್ತಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಪ್ರಶನ್ನ ರವರು ದ್ವಿತೀಯ ಪಿ ಯು ಸಿ -2 ರ ಫಲಿತಾಂಶ ಪ್ರಕಟಿಸಿದ ನಂತರ kcet 2024 ರ ಫಲಿತಾಂಶ ಬಿಡುವುದಾಗಿ ತಿಳಿಸಿದ್ದರು, ಅದೇ ರೀತಿ ಇದೀಗ ಫಲಿತಾಂಶವು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಈ ಫಲಿತಾಂಶಕ್ಕೆ ದ್ವಿತೀಯ ಪಿ ಯು ಸಿ 1&2 ರ ಅಂಕದಲ್ಲಿ ಹೆಚ್ಚಿಗೆ ಪಡೆದ ಅಂಕವನ್ನು ಪರಿಗಣಿಸುತ್ತಾರೆ. ಅದನ್ನು ಪರಿಗಣಿಸಿದ ನಂತರ ಫಲಿತಾಂಶ ಅಂದರೆ ರಾಂಕಿಂಗ್ ಅನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ :- 2023-24 ನೇ ಸಾಲಿನ Labour Card Scholarship (ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ) ಕ್ಕೆ ಅರ್ಜಿ.

KCET 2024

KCET 2024 ರ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?

  1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ಮೆಲ್ಭಾಗದಲ್ಲಿ ‘ಪ್ರವೇಶ ‘ಆಯ್ಕೆಯನ್ನು ಕ್ಲಿಕ್ ಮಾಡಿ. ‘UGCET 2024’ ಆಯ್ಕೆ ಮಾಡಿ.
  3. ನಂತರ ಅಲ್ಲೇ ಇರುವ ‘UGCET 2024 ರ ಫಲಿತಾಂಶದ ಲಿಂಕ್’ ಮೇಲೆ ಕ್ಲಿಕ್ ಮಾಡಿ.
  4. ನಂತರ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ submit ಮೇಲೆ ಕ್ಲಿಕ್ ಮಾಡಿ.
  5. ನಂತರ ನಿಮ್ಮ ಫಲಿತಾಂಶ ಕಾಣಿಸುತ್ತದೆ.