Table of Contents
ಕರ್ನಾಟಕದ ಮಹಿಳೆಯರಿಗೆ ಇದೊಂದು ಸಂತೋಷದ ಸುದ್ದಿ,ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2024-25 ನೇ ಸಾಲಿನ 05 ವಿವಿಧ ಯೋಜನೆಗಳಿಗೆ ಈಗ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಮಾಡಬಯಸುವ ಮಹಿಳೆಯರಿಗೆ ಈ ಮಾಹಿತಿ ಖಂಡಿತ ಸಹಕರಿಯಾಗುತ್ತದೆ. ತಿಳಿಯಲು ಮುಂದೆ ಓದಿ….
ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.2024-25 ನೇ ವರ್ಷದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸ್ವಂತ ಉದ್ಯೋಗ ಮಾಡಲು ಇಚ್ಛೆ ಇರುವ 18-55 ವರ್ಷದೊಳಗಿನ ಮಹಿಳೆಯರಿಗೆ ಸಂಸ್ಥೆಯ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಕರೆದಿದ್ದಾರೆ.
ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.
ಯಾವ ಯಾವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದೊಂದಾಗಿ ನೋಡೋಣ…
1. ಉದ್ಯೋಗಿನಿ ಯೋಜನೆ.( Udyogini Scheme )
ಮಹಿಳೆಯರ ಸಬಲೀಕರಣ ಕ್ಕಾಗಿ ರಾಜ್ಯ ಸರ್ಕಾರವು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಖ್ಯವಾಗಿ ಈ ಮೇಲಿನ ಉದ್ಯೋಗಿನಿ ಯೋಜನೆಯು ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಿಗೆ ತೊಡಗಿಸಿಕೊಂಡು ಸ್ವಯಂ ಉದ್ಯೋಗವನ್ನು ಮಾಡಲು ಬ್ಯಾಂಕುಗಳ ಮೂಲಕ ಸಾಲ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
SC ಮತ್ತು ST ಫಲನುಭವಿಗಳಿಗೆ
ಆದಾಯ ಮಿತಿ ಯನ್ನು 2 ಲಕ್ಷ ರೂ. ಗೆ ನಿಗದಿಮಾಡಲಾಗಿದೆ.ಹಾಗೂ
ಘಟಕ ವೆಚ್ಚ ವೆಂದು:- ಕನಿಷ್ಠ 1 ಲಕ್ಷ ರೂ. ಯಿಂದ ಗರಿಷ್ಟ 3 ಲಕ್ಷ ರೂ.
ನಿಗಮದ ಸಹಾಯ ಧನ :- ಶೇ. 50 ರಷ್ಟು
ಸಾಮಾನ್ಯ ವರ್ಗ ಫಲನುಭವಿಗಳಿಗೆ
ಆದಾಯ ಮಿತಿ ಯನ್ನು 1.5 ಲಕ್ಷ ರೂ. ಗೆ ನಿಗದಿಮಾಡಲಾಗಿದೆ.ಹಾಗೂ
ಘಟಕ ವೆಚ್ಚ ವೆಂದು:- ಗರಿಷ್ಟ 3 ಲಕ್ಷ ರೂ.
ನಿಗಮದ ಸಹಾಯ ಧನ :- ಶೇ. 30 ರಷ್ಟು
2. ಚೇತನ ಯೋಜನೆ
ದಮನಿತಾ ಮಹಿಳೆಯರಿಗೆ ಆದಾಯೋತ್ಪಾನ್ನ ಚಟುವಟಿಕೆಯನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ರೂ.30,000/-ಗಳ ಸಹಾಯಧನ ನೀಡಲಾಗುತ್ತಿದೆ.ಇದಕ್ಕೆ 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
3.ಧನ್ಯಶ್ರೀ ಯೋಜನೆ
ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ.30,000/- ಗಳ ಸಹಾಯಧನವನ್ನು ನೀಡಲಾಗುತ್ತಿದೆ.ಈ ಯೋಜನೆಗೆ 18-60 ವರ್ಷ ವಯೋಮಿತಿಯನ್ನು ನಿಗದಿಸಲಾಗಿದೆ.
4.ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
ಆದಾಯೋತ್ಪಾನ್ನ ಚಟುವಟಿಕೆಯನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ರೂ.30,000/-ಗಳ ಸಹಾಯಧನ ನೀಡಲಾಗುತ್ತಿದೆ.
5.ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ
1993-94 & 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರ ಆದಾಯೋತ್ಪಾನ್ನ ಚಟುವಟಿಕೆಯನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ರೂ.30,000/-ಗಳ ಸಹಾಯಧನ ನೀಡಲಾಗುತ್ತಿದೆ.
ಇದನ್ನೂ ಓದಿ :- ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.
ವಿಶೇಷ ಸೂಚನೆಗಳು :-
ಅರ್ಜಿಸಲ್ಲಿಸುವವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಸೀಡಿಂಗ್ ಮಾಡಿಸಿರಬೇಕು.
ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ (Unspent ) ಅನುಧಾನದಡಿ ಸೌಲಭ್ಯ ಪಡೆಯಲು ಇಚ್ಛೆಸುವವರು ಸಹ ಸೇವಾಸಿಂಧು ತಂತ್ರಾಂಶ ದಡಿ ಅರ್ಜಿ ಸಲ್ಲಿಸಬಹುದು.
ಎಲ್ಲಾ ಯೋಜನೆಯ ಅರ್ಜಿಯು ಸೇವಾಸಿಂಧು ಪೋರ್ಟಲ್ ನಲ್ಲಿ ಲಭ್ಯವಿರುತ್ತದೆ.
ಅರ್ಜಿಸಲ್ಲಿಸ ಬಯಸುವ ವ್ಯಕ್ತಿಗಳು ಬಾಪುಜಿ ಸೇವಾಕೇಂದ್ರ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಸರ್ಕಾರದ ವಿವೇಚನ ಕೋಟಾ ಅಥವಾ ನಿಗಮದ ವಿವೇಚನ ಕೋಟಾ ದಡಿ ಸೌಲಭ್ಯ ಪಡೆಯಲು ಇಚ್ಛೆಸುವ ಅರ್ಜಿದಾರರು ಮಾನ್ಯ ಸಚಿವರು /ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ ಅಥವಾ ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
2023-24 ನೆ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯ ವಿರುವುದಿಲ್ಲ.
ಅರ್ಜಿ ಸಲ್ಲಿಸುವ ದಿನಾಂಕ :-
21/08/2024 ರಿಂದ 21/09/2024 ರ ಸಂಜೆ 5:30 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
2 thoughts on “ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.”
Comments are closed.