Table of Contents
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ NKK 1137 (CIVIL PC NKK 1137 ) ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
Civil PC nkk 1137 ಹುದ್ದೆಯ ಬಗ್ಗೆ
ಪ್ರಸ್ತುತ ಅಂಕ ಪಟ್ಟಿ ಬಿಡುಗಡೆ ಮಾಡಿರುವ ಹುದ್ದೆಗೆ ದಿನಾಂಕ 12/10/2022 ರಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದರು.20/10/2022 ರಂದು ಅರ್ಜಿ ಪ್ರಕ್ರಿಯೆ ಪ್ರಾರಂಭಿಲಾಗಿತ್ತು.ನಂತರದಲ್ಲಿ ಈ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ದಿನಾಂಕ 25/02/2024 ರಂದು ನಡೆಸಲಾಗಿತ್ತು. ಇದೀಗ ಪರೀಕ್ಷೆಯ ಅಂಕವನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ :-ಸುಮಾರು 45000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ.
ನಿಮ್ಮ ಅಂಕವನ್ನು ಹೀಗೆ ಚೆಕ್ ಮಾಡಿ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಾಗರೀಕ ಪೊಲೀಸ್ ಕಾನ್ಸ್ಟೇಬಲ್ 1137 ಹುದ್ದೆಗೆ ಅರ್ಜಿ ಆಹ್ವಾನಿಸಿ ಮೊದಲ ಹಂತವಾದ ಲಿಖಿತ ಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಳಿಸಿ ಇದೀಗ ಅಭ್ಯರ್ಥಿಗಳ ಅಂಕ ಪಟ್ಟಿ(Scire List) ಬಿಡುಗಡೆ ಮಾಡಿದೆ. ನಿಮ್ಮ ಅಂಕವನ್ನು ಈ ಕೆಳಗೆ ಹೇಳಿರುವ ಕ್ರಮದ ಮೂಲಕ ತಿಳಿದುಕೊಳ್ಳಬಹುದು…
- ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.-
- ನಂತರದಲ್ಲಿ ‘Civil Police Constable NKK 1137’ ಇರುವ ಮುಂದೆ ‘APPLY NOW ‘ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರದ ಟ್ಯಾಬ್ ನಲ್ಲಿ ‘CPC Written Examination Marks ‘ ನಲ್ಲಿ ಜಿಲ್ಲಾವಾರು ಅಂಕ ಪಟ್ಟಿ ತೋರುತ್ತದೆ.
- ನೀವು ಅರ್ಜಿ ಸಲ್ಲಿಸಿದ ಜಿಲ್ಲೆ ಅಥವಾ ಯೂನಿಟ್ ಆಯ್ಕೆ ಮಾಡಿ.
- ನಂತರ ನಿಮ್ಮ ಅಂಕಪಟ್ಟಿಯ pdf ಡೌನ್ಲೋಡ್ ಆಗುತ್ತದೆ.
- pdf ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಅಥವಾ ಹೆಸರಿನ ಮೂಲಕ ನಿಮ್ಮ ಅಂಕ ನೋಡಿಕೊಳ್ಳಬಹುದು.
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.
ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಅಂಕವನ್ನು ಬಿಡಲಾಗಿದ್ದು, ನಿಮ್ಮ ಅಂಕದಲ್ಲಿ ಏನಾದರು ಆಕ್ಷೇಪಣೆಗಳಿದ್ದಲ್ಲಿ ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಿರುವ ಇಮೇಲ್ ಗೆ ದಿನಾಂಕ 15/06/2024 ರ ಸಂಜೆ 5 ಗಂಟೆ ಒಳಗೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
Disqualified / Rejected ಅಭ್ಯರ್ಥಿಗಳ ಪಟ್ಟಿ ಬಿಡಲಾಗಿದೆ.
ಈ ಪರೀಕ್ಷೆಯಲ್ಲಿ ಹಲವಾರು ಕಾರಣಗಳಿಂದ ಅನೇಕ ಅಭ್ಯರ್ಥಿಗಳ ಅಂಕವನ್ನು ಪ್ರಕಟಿಸಲಾಗಿರುವುದಿಲ್ಲ, ಆದ್ದರಿಂದ ಕಾರಣ ಸಹಿತವಾಗಿ Disqualified / Rejected ಅಭ್ಯರ್ಥಿಗಳ ಪಟ್ಟಿ ಬಿಡಲಾಗಿದೆ.
ಇದನ್ನೂ ಮೇಲೆ ಹೇಳಿರುವ ಹಾಗೆ 1 ಮತ್ತು 2ನನೇ ಹಂತವನ್ನು ಪಾಲಿಸಿ ನಂತರದಲ್ಲಿ CPC1137 Posts – ‘Click here to view the Disqualified / Rejected Candidates List’ ಮೇಲೆ ಕ್ಲಿಕ್ ಮಾಡಿ ನೋಡಿಕೊಳ್ಳಬಹುದು.