Table of Contents
2023-24 ನೇ ಸಾಲಿನ ಎಸ್. ಎಸ್. ಎಲ್. ಸಿ ರಿಸಲ್ಟ್ – 2024 (SSLC Result 2024) ಫಲಿತಾಂಶವು ಹೊರಬಿದ್ದಿದ್ದು, ಈ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಯುವಿಕೆಗೆ ಮುಕ್ತಿ ದೊರೆತಂತಾಗಿದೆ.
ಹೌದು…ಎಲ್ಲರೂ ಕಾತುರದಿಂದ ಕಾಯುತ್ತಿದ್ದ SSLC Result 2024 ನಿನ್ನೆ (ಮೇ 09,2024) ರಂದು ಬೆಳಿಗ್ಗೆ 10.30 ಕ್ಕೆ ಪ್ರಕಟಗೊಂಡಿತ್ತು, ಅದೇ ದಿನ ಬೆಳಿಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಮತ್ತು ನಿರ್ದೇಶಕರಾದ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಮಂಡಳಿಯು ತದನಂತರ ಪರೀಕ್ಷೆಯ Result ಪ್ರಕಟಿಸಿತು. ಮೊದಲ ಹಂತದ ವಾರ್ಷಿಕ ಪರೀಕ್ಷೆಯಾದ ಈ ಪರೀಕ್ಷೆಯನ್ನು 8,59,967 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 6,31,204 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಈ ಸಾಲಿನ (2023-24 ) ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 73.40 ರಷ್ಟು ಫಲಿತಾಂಶ ಪಡೆದುಕೊಂಡಿದೆ.ಈ ಬಾರಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯೂ ಕರ್ನಾಟಕದಾದ್ಯಂತ 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲು ಅನುವು ಮಾಡಿಕೊಟ್ಟಿತ್ತು.
ಅಂಕಿತಾ ಬಸಪ್ಪ – ರಾಜ್ಯಕ್ಕೆ ಪ್ರಥಮ ಸ್ಥಾನ
ಈ ವರ್ಷದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನ ವನ್ನು , ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು,ಶಿವಮೊಗ್ಗ ಜಿಲ್ಲೆಯು ತೃತೀಯ ಸ್ಥಾನವನ್ನು ಪಡೆದು ಕೊಡಿದ್ದು,ಯಾದಗಿರಿ ಜಿಲ್ಲೆಯು ಕೊನೆಯ ಸ್ಥಾನ ಪಡೆದುಕೊಂಡಿದೆ.ಅಂಕಿತಾ ಬಸಪ್ಪ ವಿದ್ಯಾರ್ಥಿನಿಯು 625 ಕ್ಕೆ 625 ಅಂಕವನ್ನು ಪಡೆದು ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ಏಕೈಕ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ.ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಎಂಬ ಮಾತನ್ನು ಪುನರ್ ಉಚ್ಚರಿಯುವಂತೆ ಆಗಿದೆ.ಹಾಗೂ 7 ವಿದ್ಯಾರ್ಥಿಗಳು 624 ಅಂಕ ಪಡೆದು ಉತ್ತಮ ರಾಂಕ್ ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ :- SSLC ಪರೀಕ್ಷೆ 2024 RESULT ಯಾವಾಗ ಬರುತ್ತೆ : ಮೇ 08 ಕ್ಕೆ ಬರುತ್ತಾ? – SSLC Resilt 2024
SSLC 2024 RESULT -1 ಚೆಕ್ ಮಾಡುವುದು ಹೇಗೆ?
ಈ ಬಾರಿಯ SSLC ಪರೀಕ್ಷೆ -1 2024 ರ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಫಲಿತಾಂಶದ ಅಧಿಕೃತ ವೆಬ್ಸೈಟ್ (website ) ಗೆ ಭೇಟಿ ನೀಡಿ, ನಿಮ್ಮ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು..
How To Check SSLC Result 2024 –
- https://karresults.nic.in/ ಗೆ ಭೇಟಿ ನೀಡಿ.
- ಎಸ್.ಎಸ್.ಎಲ್.ಸಿ. 2024 ಪರೀಕ್ಷೆ – 1 ರ ಫಲಿತಾಂಶ ಪ್ರಕಟಣೆ / SSLC 2024 Exam – 1 Result Announced on 09/05/2024 – ಈ link Click ಮಾಡಿ.
- ಹೊಸ tab ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ,view ಮೇಲೆ click ಮಾಡಿದರೆ ಸಾಕು.ನಿಮ್ಮ ಫಲಿತಾಂಶ ದೊರೆಯುತ್ತದೆ,ಅದನ್ನು print ತೆಗೆದುಕೊಳ್ಳಬಹುದು.
ನಿಮ್ಮ ಶಾಲೆಯಲ್ಲಿಯೂ ಫಲಿತಾಂಶ ಪ್ರಕಟಗೊಳ್ಳಲಿದೆ.
ನಿಮ್ಮ ನಿಮ್ಮ ಫಲಿತಾಂಶವನ್ನು ಎಲ್ಲಿಬೇಕಿದ್ದರು ಯಾವಾಗ ಬೇಕಿದ್ದರು, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮುಖಾಂತರ ನೋಡಿಕೊಳ್ಳಬಹುದು, ಒಂದು ವೇಳೆ ನಿಮ್ಮ ಫಲಿತಾಂಶವನ್ನು ತಿಳಿದುಕೊಳ್ಳಲು ಆಗದಿದ್ದರೆ, ನಿಮ್ಮ ನಿಮ್ಮ ಶಾಲೆಯಲ್ಲಿ ಫಲಿತಾಂಶದ ದಿನ ಅಂದರೆ ಮೇ 09, ರಂದು ಮಧ್ಯಾಹ್ನ ಶಾಲೆಯ ನೋಟೀಸ್ ಬೋರ್ಡ್ ನಲ್ಲಿಪ್ರಕಟಿಸಿರುತ್ತಾರೆ ನೀವು ಅದನ್ನು ನೋಡಿಕೊಳ್ಳಬಹುದು.