ಗೃಹಲಕ್ಷ್ಮಿ (Gruhalakshmi)2000 ರೂ 11ನೇ ಕಂತಿನ ಹಣ ಬಿಡುಗಡೆ ಯಾವಾಗ?

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ (Gruhalakshmi) ಯೋಜನೆಯನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮನೆಯ ಒಡತಿಗೆ ತಿಂಗಳಿಗೆ 2000ರೂ ಗಳ ಸಹಾಯ ಧನವನ್ನು ನೀಡುವ ಯೋಜನೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಗಳಲ್ಲಿ ಒಂದಾಗಿದೆ. ಈವರೆಗೆ 10 ಕಂತುಗಳಲ್ಲಿ ಅರ್ಹ ಮಹಿಳಾ ಫಲನುಭವಿಗಳಿಗೆ ಸಹಾಯ ಧನ ಅವರವರ ಖಾತೆಗೆ ಜಮೆ ಮಾಡಲಾಗಿದೆ. ಅದೇ ರೀತಿ 11 ನೇ ಕಂತಿನ ಹಣ ಬರುವ ನೀರಿಕ್ಷೆಯಲ್ಲಿ ಫಲನುಭವಿಗಳು ಇದ್ದಾರೆ.

Gruhalakshmi ಯೋಜನೆಇದುವರೆಗೂ ಹಣ ಬರದೇ ಇರುವುದಕ್ಕೆ ಮುಖ್ಯ ಕಾರಣಗಳು?

Gruhalakshmi

ಕೆಲವು ಮಹಿಳಾ ಅರ್ಹ ಫಲನುಭವಿಗಳಿಗೆ ಈವರೆಗೂ ಗೃಹಲಕ್ಷ್ಮಿ(Gruhalakshmi) ಯೋಜನೆಯ ಸಹಾಯ ಧನ ದೊರೆತಿಲ್ಲ, ಇದಕ್ಕೆ ಕೆವೈಸಿ ಮಾಹಿತಿ ಇಂದಾಗಿ ಅಥವಾ ಅಧಿಕೃತ ಮಾಹಿತಿಯ ಸಮಸ್ಯೆಯಿಂದ ಹಣವು ಜಮೆಯಾಗದಿರಬಹುದು. ಈ ಯೋಜನೆಯ ಹಣವು ನೇರವಾಗಿ DBT ಮೂಲಕ ನಿಮ್ಮ ಖಾತೆಗೆ ಜಮೆಯಾಗುವುದರಿಂದ ನಿಮ್ಮ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದಿದ್ದಲ್ಲಿ NPCI mapping ಆಗಿರುವುದಿಲ್ಲ. ಆದ್ದರಿಂದ ನಿಮ್ಮ ಈ ಯೋಜನೆಯ ಹಣವು ಖಾತೆಗೆ ಜಮೆಯಾಗಿರುವುದಿಲ್ಲ.ಹಾಗೆಯೇ ನಿಮ್ಮ ರೇಷನ್ ಕಾರ್ಡ್ ಅನ್ನು ಕೆವೈ ಸಿ ಮಾಡಿಸಿಕೊಳ್ಳುವುದು ಅತಿ ಮುಖ್ಯ ಇದರಿಂದಾಗಿಯೂ ಹಣವು ಖಾತೆಗೆ ಜಮೆಯಾಗದೆ ಇರಬಹುದು.

ಇದನ್ನೂ ಓದಿ :-ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.

ಆಧಾರ್ – ಬ್ಯಾಂಕ್ ಖಾತೆ ಜೋಡಣೆ ಮಾಡುವುದು ಹೇಗೆ?

NPCI Mapping ಅಥವಾ ಆಧಾರ್ ಮತ್ತು ಬ್ಯಾಂಕ್ ಖಾತೆಯ ಜೋಡಣೆ, ಇದನ್ನೂ ನಿಮ್ಮ ಬ್ಯಾಂಕ್ ಕಚೇರಿಗೆ ಹೋಗಿ ಅಲ್ಲಿನ ಸಿಬ್ಬಂದಿಗೆ ಈ ಯೋಜನೆಯ ಹಣ ಬರಲು NPCI Mapping ಮಾಡಿ ಕೊಡಲು ತಿಸಿದ್ದಲ್ಲಿ, NPCI mapping ಮಾಡಲು ಬೇಕಾಗಿರುವ ಮುಂದಿನ ಹಂತವನ್ನು ವಿವರಿಸುತ್ತಾರೆ.

NPCI Mapping ಗೆ ಬೇಕಾಗುವ ದಾಖಲೆಗಳು ಯಾವುವು?

  1. ನಿಮ್ಮ ಆಧಾರ್ ಕಾರ್ಡ್
  2. ನಿಮ್ಮ ಬ್ಯಾಂಕ್ ಪಾಸ್ ಬುಕ್
  3. ಅರ್ಜಿ ನಮೂನೆ (ಬ್ಯಾಂಕ್ ಶಾಖೆಯಲ್ಲಿ ದೊರೆಯುತ್ತದೆ )

11ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ?

ಈಗಾಗಲೇ ಚುನಾವಣೆಯ ಎಲ್ಲಾ ಹಂತಗಳು ಮುಗಿದಿರುವುದರಿಂದ ಅತಿ ಶೀಘ್ರದಲ್ಲಿ ಗೃಹಲಕ್ಷ್ಮಿ (Gruhalakshmi)ಯೋಜನೆಯ 11ನೇ ಕಂತಿನ ಹಣವನ್ನು ಬಿಡುಗಡೆ ಮಾಡಬಹುದು ನಂತರ ಅರ್ಹ ಫಲನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುತ್ತಾರೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಈಗಾಗಲೇ ಸಮಯ ವಾಗಿರುದರಿಂದ ಅತಿ ಬೇಗನೆ ಜಮೆಯಾಗಬಹುದು.

ಇದನ್ನೂ ಓದಿ :-PM ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣದ ಬಗ್ಗೆ ಮಾಹಿತಿ.ಹೀಗೆ ನಿಮ್ಮ ಹೆಸರು ಚೆಕ್ ಮಾಡಿ.