Student Bus Pass: 2024-25 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಆಹ್ವಾನ -ಹೀಗೆ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೋಸ್ಕರ ರಿಯಾಯತಿ ದರದಲ್ಲಿ ವಿದ್ಯಾರ್ಥಿ ಬಸ್ ಪಾಸ್(Student Bus Pass)ಸೌಲಭ್ಯವನ್ನು ನೀಡುತ್ತಿದೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿ ಬಸ್ ಪಾಸ್ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ವರ್ಷ ಅಂದರೆ 2024-25 ನೇ ಸಾಲಿನ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಸರ್ಕಾರದ ರಾಜ್ಯ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಬಸ್ ಪಾಸ್ ನೀಡಲು ಪ್ರಕಟಣೆಯನ್ನು ಹೊರಡಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ತಮ್ಮ ಪಾಸ್ ಅನ್ನು ಪಡೆದುಕೊಳ್ಳಬಹುದಾಗಿದೆ.

Student Bus Pass ಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು 2024-25 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅರ್ಜಿಯನ್ನು online ಮೂಲಕ ಕರೆಯಲಾಗಿದ್ದು,ಈ ವಿದ್ಯಾರ್ಥಿ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಗ್ರಾಮ ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳ್ಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ :-KCET 2024 ಫಲಿತಾಂಶ ಪ್ರಕಟ – ಹೀಗೆ ಚೆಕ್ ಮಾಡಿ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.

ಈ ಬಾರಿಯ ಬಸ್ ಪಾಸ್ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕೆಲವು ಮುಖ್ಯವಾದ ದಾಖಲೆಗಳನ್ನು ನೀಡುವುದು ಅವಶ್ಯಕ ವಾಗಿದೆ. ಆದ್ದರಿಂದಾಗಿ ಈ ಕೆಳಗೆ ಹೇಳಿರುವ ದಾಖಲೆಗಳನ್ನು ಸಿದ್ದವಾಗಿರಿಸಿಕೊಳ್ಳಿ.

  1. ವಿದ್ಯಾಸಂಸ್ಥೆ (ಶಾಲೆ ಅಥವಾ ಕಾಲೇಜು ) ಗೆ ಶುಲ್ಕ ಪಾವತಿಸಿದ ರಶೀದಿ.(Fees Receipt )
  2. ಆಧಾರ್ ಕಾರ್ಡ್
  3. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
Student bus pass

Student Bus Pass ಗೆ ಎಷ್ಟು ಶುಲ್ಕವನ್ನು ಪಾವತಿಸಬೇಕು?

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ರಿಯಾಯತಿ ದರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆಯನ್ನು ಒದಗಿಸಿದ್ದು, ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ತರಗತಿಯ ಅನುಸಾರ ಶುಲ್ಕವು ಬದಲಾಗುತ್ತದೆ.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ 150 ರೂ ಗಳು ಶುಲ್ಕವನ್ನು ಪಾವತಿಸಬೇಕು.

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಸಾಮಾನ್ಯ ವರ್ಗದ ಬಾಲಕರಿಗೆ 750 ರೂ ಮತ್ತು ಪರಿಶಿಷ್ಟ ಜಾತಿ /ಪಂಗಡ ಬಾಲಕರಿಗೆ 150ರೂ ಪಾವತಿಸಬೇಕು. ಹಾಗೆಯೇ ಸಾಮಾನ್ಯ ವರ್ಗದ ಬಾಲಕಿಯರಿಗೆ 550ರೂ ಮತ್ತು ಪರಿಶಿಷ್ಟ ಜಾತಿ /ಪಂಗಡ ಬಾಲಕಿಯರಿಗೆ 150ರೂ ಪಾವತಿಸಬೇಕು.

ಕಾಲೇಜು /ಡಿಪ್ಲೋಮ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಸಾಮಾನ್ಯ ವರ್ಗದವರಿಗೆ 1050 ರೂ ಮತ್ತು ಪರಿಶಿಷ್ಟ ಜಾತಿ /ಪಂಗಡ ವಿದ್ಯಾರ್ಥಿಗಿಗಳಿಗೆ 150ರೂ

ಇದನ್ನೂ ಓದಿ :-2023-24 ನೇ ಸಾಲಿನ Labour Card Scholarship (ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ) ಕ್ಕೆ ಅರ್ಜಿ.

ಐ ಟಿ ಐ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ ಸಾಮಾನ್ಯ ವರ್ಗದವರಿಗೆ 1310 ರೂ ಮತ್ತು 160 ಪರಿಶಿಷ್ಟ ಜಾತಿ /ಪಂಗಡ ವಿದ್ಯಾರ್ಥಿಗಳಿಗೆ.

ವೃತ್ತಿಪರ ಕೋರ್ಸ್ 10 ತಿಂಗಳ ಅವಧಿಗೆ 1550 ರೂ ಮತ್ತು ಪರಿಶಿಷ್ಟ ಜಾತಿ /ಪಂಗಡ ವಿದ್ಯಾರ್ಥಿಗಳಿಗೆ 150ರೂ.

ಸಂಜೆ ಕಾಲೇಜು /ಪಿ ಹೆಚ್ ಡಿ 10 ತಿಂಗಳ ಅವಧಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 1350 ರೂ ಮತ್ತು ಪರಿಶಿಷ್ಟ ಜಾತಿ /ಪಂಗಡ ವಿದ್ಯಾರ್ಥಿಗಳಿಗೆ 150 ರೂ.

ಸೂಚನೆ :- ಈ ಮೇಲೆ ಹೇಳಿರುವುದರ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳ್ಳಲ್ಲಿ ವಿಚಾರಿಸಬಹುದಾಗಿದೆ.

1 thought on “Student Bus Pass: 2024-25 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಆಹ್ವಾನ -ಹೀಗೆ ಅರ್ಜಿ ಸಲ್ಲಿಸಿ.”

Comments are closed.