ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.

ನಮಸ್ಕಾರ ಸ್ನೇಹಿತರೆ,ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ರಾಜ್ಯದ ಜನತೆಗೆ ನೀಡುತ್ತಾ ಬಂದಿದೆ. ಕೇಂದ್ರ ಸರ್ಕಾರದ 5 kg ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದ 5 kg ಅಕ್ಕಿಯನ್ನು ಸೇರಿಸಿ 10kg ಉಚಿತ ಅಕ್ಕಿಯನ್ನು ನೀಡುವ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ ನೀಡಬೇಕಿರುವ 5kg ಉಚಿತ ಅಕ್ಕಿಯ ಬದಲು ಹಣವನ್ನು ಅರ್ಹ ಫಲನುಭವಿಯ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.

ಈಗಾಗಲೇ ಹಲವು ತಿಂಗಳುಗಳ ಅಕ್ಕಿಯ ಬದಲು ಹಣವನ್ನು ಅರ್ಹ ಫಲನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಆದರೂ ಕೂಡ ಹಲವಾರು ಫಲನುಭವಿಗಳಿಗೆ ಇನ್ನೂ ಹಣ ಸಂದಾಯ ವಾಗದೆ ಇರುವುದು ಅಥವಾ ಕೆಲವು ಕಂತುಗಳ ಹಣ ಜಮೆಯಾಗಿ ಉಳಿದ ಹಣ ಜಮೆಯಾಗದೆ ಇರುವ ಸಮಸ್ಯೆಗಳು ಇರಬಹುದು. ಇದಕ್ಕೆ ಹಲವಾರು ಕಾರಣಗಳಿವೆ.

ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗದಿರಲು ಕಾರಣಗಳು.

ಈಗಾಗಲೇ ಹೇಳಿರುವ ಹಾಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗದೆ ಇರಲು ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಯೂ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗದಿರುವುದು ಕೂಡ ಒಂದಾಗಿದೆ. ಆಧಾರ್ ನಂಬರ್ ಅನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.ಏಕೆಂದರೆ ಸರ್ಕಾರದ ಪ್ರತಿ ಯೋಜನೆಯ ಸೌಲಭ್ಯವನ್ನು ಸಹಾಯ ಧನ ವನ್ನು ಪಡೆಯಲು DBT ಮೂಲಕವೇ ಸಾಧ್ಯವಾಗುವುದರಿಂದ, ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಬೇಕೇ ಬೇಕು.

ಇದನ್ನೂ ಓದಿ :-PM ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣದ ಬಗ್ಗೆ ಮಾಹಿತಿ.ಹೀಗೆ ನಿಮ್ಮ ಹೆಸರು ಚೆಕ್ ಮಾಡಿ.

ಇನ್ನೊಂದು ಅತಿ ಮುಖ್ಯ ಕಾರಣವೆಂದರೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ekyc ಮಾಡಿಸದೇ ಇರುವುದು ಕೂಡ ಹೌದು. ಅತಿ ಶೀಘ್ರವಾಗಿ ನಿಮ್ಮ ಮನೆಯ ಎಲ್ಲಾ ಸದಸ್ಯರ ekyc ಯನ್ನು ಪೂರ್ಣಗೋಳಿಸಿಕೊಂಡರೆ ನೀವು ಈ ಯೋಜನೆಯ ಫಲಾನುಭವಿಯಾಗಿ ಇರಲು ಸಾಧ್ಯ.

ಅನ್ನಭಾಗ್ಯ ಯೋಜನೆ

NPCI ಅಥವಾ ಆಧಾರ್ -ಬ್ಯಾಂಕ್ ಖಾತೆ ಜೋಡಣೆ ಹೇಗೆ?

ಮೇಲೆ ಹೇಳಿರುವ ಹಾಗೆಅನ್ನಭಾಗ್ಯ ಯೋಜನೆಯ ಹಣ ಪಡೆಯಲು NPCI mapping ಅಥವಾ ಆಧಾರ್ -ಬ್ಯಾಂಕ್ ಖಾತೆ ಜೋಡಣೆಯು ಮುಖ್ಯವಾಗಿ ಮಾಡಲೇ ಬೇಕಾಗಿರುವ ಕೆಲಸವಾಗಿದೆ. ಇದನ್ನೂ ಮಾಡಲು ನಿಮ್ಮ ಬ್ಯಾಂಕ್ ಗೆ ತೆರಳಿ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಿ ಬೇಕಾದ ದಾಖಲೆಗಳನ್ನು ನೀಡಿ NPCI Mapping ಮಾಡಿಸಿ ಕೊಳ್ಳಬೇಕು. ಇದಕ್ಕೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಬ್ಯಾಂಕ್ ಗೆ ತೆಗೆದುಕೊಂಡು ಹೋಗಬೇಕು.

ಹಣ ಜಮೆಯಾಗಿದೆಯೇ? ಹೀಗೆ ಚೆಕ್ ಮಾಡಿ.

ಈ ಯೋಜನೆಯ ಹಣವು ಪ್ರತಿ ತಿಂಗಳು ನಿಮ್ಮ ನಿಮ್ಮ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ನಿಮಗೆ ಯಾವೆಲ್ಲಾ ತಿಂಗಳ ಹಣ ಸಂದಾಯವಾಗಿದೆ ಮತ್ತು ಯಾವ ತಿಂಗಳಿನ ಹಣ ಬಂದಿಲ್ಲ ಎಂದು ತಿಳಿಯಲು ಈ ಕೆಳಗಿನ ಕ್ರಮದಿಂದ ತಿಳಿದು ಕೊಳ್ಳಬಹುದು.

  1. ನಿಮ್ಮ ಮೊಬೈಲ್ ನ playstore ಮೂಲಕ ಕರ್ನಾಟಕ ಸರ್ಕಾರದ ಅಧಿಕೃತ App ಆದ ‘DBT ಕರ್ನಾಟಕ ‘app ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು.
  2. ನಂತರ ನಿಮ್ಮ ಅಂದರೆ ಮನೆಯ ಯಜಮಾನಿ ಯ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಈ app ಲಾಗಿನ್ ಮಾಡಿಕೊಳ್ಳುವುದು.
  3. ಅಲ್ಲಿ ನೋಡುವ ‘payment status ‘ಮೇಲೆ click ಮಾಡುವುದು.
  4. ನಂತರದಲ್ಲಿ ನಿಮಗೆ ಎಲ್ಲಾ payment list ತೋರುತ್ತದೆ. ಇದನ್ನೂ ನೋಡಿಕೊಳ್ಳುವುದು.

ಇದನ್ನೂ ಓದಿ :- ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ. ಹಣ ಬಂದಿರುವುದು ಹೀಗೆ ಚೆಕ್ ಮಾಡಿ.