Table of Contents
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಬೆಳೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದೂ ಈಗಾಗಲೇ ಅರ್ಹ ಫಲನುಭವಿ ರೈತರ ಖಾತೆಗಳಿಗೆ ಜಮೆಯಾಗಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಇದೀಗ ಪರಿಹಾರದ ಹಣವು ಬಿಡುಗಡೆಯಾಗಿ ಅರ್ಹ ಫಲನುಭವಿಗಳಿಗೆ ತಲುಪಿದೆ.
ಇನ್ನೂ ಕೆಲವು ರೈತ ಭಾಂದವರಿಗೆ ಬೆಳೆ ಪರಿಹಾರ ಖಾತೆಗೆ ಜಮೆ ಯಾಗಿರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.ಹಣವು ಖಾತೆಗೆ ಜಮೆಯಾಗದೆ ಇರುವುದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ (Link) ಮಾಡದೇ ಇರುವುದೇ ಆಗಿದೆ. ಅದಕ್ಕೂ ಮೊದಲು ಬರ ಪರಿಹಾರ ಜಮೆಯಾಗಿರುವವರ ಹೆಸರುಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಿ. ನಿಮ್ಮ ಹೆಸರನ್ನು ಹುಡುಕುವ ಪ್ರಕ್ರಿಯೆಯನ್ನು ಮುಂದೆ ವಿವರಿಸಲಾಗಿದೆ, ಸಂಪೂರ್ಣವಾಗಿ ಓದಿ….
2023-24 ನೇ ಸಾಲಿನ ಬೆಳೆ ಪರಿಹಾರ ಫನುಭವಿಗಳ ಪಟ್ಟಿ.
- ಕರ್ನಾಟಕ ಸರ್ಕಾರದ ಪರಿಹಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಪರಿಹಾರ payment status ಅನ್ನು ಆಯ್ಕೆ ಮಾಡಿ.
- ನಂತರದಲ್ಲಿ ವರ್ಷವನ್ನು ಆಯ್ಕೆ ಮಾಡಿ,ಋತು ಆಯ್ಕೆ ಮಾಡಿ,ವಿಪತ್ತಿನ ವಿಧ ಆಯ್ಕೆ ಮಾಡಿ.
- ನಂತರ ಜಿಲ್ಲೆ, ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
- ಆನಂತರ get report ಮೇಲೆ click ಮಾಡಿ,
- ನಿಮ್ಮ ಗ್ರಾಮದ ಬರ ಪರಿಹಾರದ ಪಟ್ಟಿ ತೋರುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ.
ಹಣ ಸಂದಾಯವಾಗದಿರಲು ಮುಖ್ಯ ಕಾರಣ?
ಈ ಬಾರಿಯ ಪರಿಹಾರದ ಹಣವು ಅರ್ಹ ಫಲನುಭವಿಗಳಿಗೆ ಸಂದಾಯವಾಗದಿರಲು ಮುಖ್ಯ ಕಾರಣಗಳಲ್ಲಿ ಒಂದಾದ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡದಿರುವುದು. ಎಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರದ ಯಾವುದೇ ರೀತಿಯ ಸಬ್ಸಿಡಿ, ಸಹಾಯ ಧನ ಮತ್ತು ಪರಿಹಾರ ಧನ ಯಾವುದೇ ರೀತಿಯ ಹಣವನ್ನು DBT ಮೂಲಕ ಅರ್ಹ ಫಲನುಭವಿಗಳ ಖಾತೆಗೆ ನೇರವಾಗಿ ಸಂದಾಯವಾಗುತ್ತದೆ. ಇದಕ್ಕೆ ಮುಖ್ಯವಾದದ್ದೂ ಆಧಾರ್ ಸಂಖ್ಯೆಯನ್ನು ಯಾವ ಬ್ಯಾಂಕ್ ಖಾತೆಗೆ ಜೋಡಣೆ ಮಾಡಿರುತ್ತಿರಿ ಆ ಖಾತೆಗೆ ನಿಮ್ಮ ಹಣ ಜಮೆಯಾಗುತ್ತದೆ.
ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ (Adhar Seeding )ಮಾಡುವ ಪ್ರಕಿಯೆ.
- ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಅನ್ನು ತೆಗೆದು ಕೊಂಡು ನಿಮ್ಮ ಬ್ಯಾಂಕ್ ನ ಕಚೇರಿಗೆ ಭೇಟಿ ನೀಡಿ.
- ಬ್ಯಾಂಕ್ ಸಿಬ್ಬಂದಿಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಜೋಡಣೆ ಮಾಡುವ ಬಗ್ಗೆ ಸಕಾರಣ ದೊಂದಿಗೆ ಮಾಹಿತಿ ನೀಡಿ.
- ಬ್ಯಾಂಕ್ ಸಿಬ್ಬಂದಿಗೆ NPCI mapping ಮಾಡುವ ಬಗ್ಗೆ ತಿಳಿಸಿ. ಅದಕ್ಕೆ ಸಂಭಂದಿಸಿದ ಅರ್ಜಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ನೀಡಿ.
- ಈ ಕ್ರಮವನ್ನು ಪೂರ್ಣಗೊಳಿಸಿದರೆ. ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿದೆ ಎಂದು ಅರ್ಥ.
ಇದನ್ನೂ ಓದಿ :- PM ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣದ ಬಗ್ಗೆ ಮಾಹಿತಿ.ಹೀಗೆ ನಿಮ್ಮ ಹೆಸರು ಚೆಕ್ ಮಾಡಿ.
1 thought on “ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ. ಹಣ ಬಂದಿರುವುದು ಹೀಗೆ ಚೆಕ್ ಮಾಡಿ.”
Comments are closed.