Table of Contents
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM ಕಿಸಾನ್ ಸಮ್ಮಾನ್ )ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತ ಫಲನುಭವಿಗಳಿಗೆ 2000 ರೂ ಗಳ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ಗಳ ನೆರವನ್ನು ಅರ್ಹ ಫಲನುಭವಿಗಳಿಗೆ ನೀಡುತ್ತಾ ಬಂದಿದೆ.
ಅದರಂತೆಯೇ ಈವರೆಗೆ 16 ಕಂತುಗಳ ಹಣವನ್ನು ಅರ್ಹ ಫಲನುಭವಿಗಳ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲಾಗಿದೆ.ಈ 16ನೇ ಕಂತಿನ 2000ರೂಗಳ ಹಣವನ್ನು ಈಗಾಗಲೇ DBT ಯ ಮೂಲಕ ಫೆಬ್ರವರಿ ತಿಂಗಳಿನಲ್ಲಿ ಎಲ್ಲಾ ಅರ್ಹ ಫಲನುಭವಿಗಳ ಖಾತೆಗೆ ವರ್ಗಯಿಸಲಾಗಿದೆ. ಇದೀಗ 17 ನೇ ಕಂತಿನ ಹಣವು ಬಿಡುಗಡೆಯಗುವ ಸಮಯ ಹತ್ತಿರದಲ್ಲಿದೆ.
ಯಾವಾಗ PM ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಜಮೆಯಾಗುತ್ತದೆ?
ಮೇಲೆ ಹೇಳಿರುವಂತೆ 16ನೇ ಕಂತಿನ ಹಣವು ಜಮೆಯಾಗಿ ಸರಿಸುಮಾರು 3 ತಿಂಗಳ ಕಾಲ ವಾಗಿದೆ. ಇದೀಗ 17ನೇ ಕಂತಿನ ಹಣ ಜಮೆಯಾಗುವ ಬಗ್ಗೆ ರೈತರು ಕಾಯುತ್ತಿದ್ದಾರೆ. ಈ 17ನೇ ಕಂತಿನ ಹಣದ ಬಿಡುಗಡೆಯ ಬಗ್ಗೆ ಇಲ್ಲಿಯ ವರೆಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಅಂದರೆ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸಂಭವವಿದೆ.ಈ 17ನೇ ಕಂತಿನ ಹಣ ಪಡೆಯಲು ಅರ್ಹ ರೈತರು PM ಕಿಸಾನ್ ಸಮ್ಮಾನ್ ನಿಧಿ ಅಧಿಕೃತ ವೆಬ್ಸೈಟ್ ನಲ್ಲಿ ekyc ಪೂರ್ಣಗೊಳಿಸಬೇಕು.
17ನೇ ಕಂತಿನ ಹಣ ಪಡೆಯಲು ಈ ಕೆಲಸವನ್ನು ಮಾಡಲೇಬೇಕು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇನ್ನೂ ಮುಂದೆ ಹಣವನ್ನು ಪಡೆಯಲು ಬಯಸುವ ಅರ್ಹ ರೈತರು ಕಿಸಾನ್ ಸಮ್ಮಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ತಮ್ಮ ದಾಖಲೆಯನ್ನು ನೀಡಿ ekyc ಪೂರ್ಣಗೊಳಿಸಬೇಕು.ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಸೂಕ್ತವಾಗಿದೆ. ಇಲ್ಲದಿದ್ದಲ್ಲಿ ಈ ಯೋಜನೆಯಡಿಯಲ್ಲಿ ಮುಂದೆ ಬರುವ ಯಾವುದೇ ಆರ್ಥಿಕ ನೆರವನ್ನು ರೈತರು ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ :- ಮುರ್ಡೇಶ್ವರಕ್ಕೆ(Murdeshwara)ಹೋಗುವುದಾದರೆ ಇದನ್ನೂ ತಿಳಿದುಕೊಳ್ಳಿ.
PM ಕಿಸಾನ್ ಸಮ್ಮಾನ್ ಯೋಜನೆಯ ekyc ಮಾಡುವುದು ಹೇಗೆ?
- ಮೊದಲನೆಯದಾಗಿ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಆದ pmkisan.gov.in ಗೆ ಭೇಟಿ ನೀಡಿ.
- ತದನಂತರ ಈ ವೆಬ್ಸೈಟ್ ನಾ ಮುಖ ಪುಟ ತೆರೆದು ಕೊಳ್ಳುತ್ತದೆ. ಮುಖ ಪುಟದ ಪ್ರಾರಂಭದಲ್ಲಿ ekyc ಎಂಬ ಟ್ಯಾಬ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
- ನಂತರದ ಪೇಜ್ ನಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು ನಂತರ ಮೊಬೈಲ್ ನಂಬರ್ ಕೇಳುತ್ತದೆ ಅದನ್ನು ಸರಿಯಾಗಿ ನಮೂದಿಸಬೇಕು.
- ನಂತರದಲ್ಲಿ ಆಧಾರ್ ಲಿಂಕ್ ಆದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು.
- ಈ ಮೇಲೆ ಹೇಳಿರುವ ಕ್ರಮವನ್ನು ಮಾಡಿದಾಗ ನಿಮ್ಮ ekyc ಪೂರ್ಣಗೊಳ್ಳುತ್ತದೆ.
ಫಲನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಹ ಫನಾಭವಿಗಳ ಪಟ್ಟಿಯನ್ನು ನೋಡಬಹಾಹುದಾಗಿದೆ.17ನೇ ಕಂತಿನ ಹಣ ಪಡೆಯಲು ಅರ್ಹವಿರುವ ರೈತ ಹೆಸರನ್ನು ಈ ಪಟ್ಟಿಯ ಮೂಲಕ ನೋಡಬಹುದಾಗಿದೆ.
- ಮೊದಲನೆಯದಾಗಿ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಆದ pmkisan.gov.in ಗೆ ಭೇಟಿ ನೀಡಿ.
- ಮುಖ ಪುಟದ ಕೆಳಭಾಗದಲ್ಲಿ ಫಲನುಭವಿಗಳ ಪಟ್ಟಿ (Beneficiary List) ಮೇಲೆ ಕ್ಲಿಕ್ ಮಾಡಿ.
- ತದನಂತರ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಅಥವಾ ನಗರ ಮತ್ತು ಗ್ರಾಮ ವನ್ನು ಆಯ್ದು ಕೊಂಡು ಸಲ್ಲಿಸಬೇಕು.
- ನಂತರ ಫಲನುಭವಿಗಳ ಪಟ್ಟಿ ನಿಮ್ಮ ಮುಂದೆ ತೆರೆಯುತ್ತದೆ. ಇದರಲ್ಲಿ ನಿಮ್ಮ ಹೆಸರನ್ನು ಹುಡುಕಿ ಕೊಳ್ಳುವುದು.
ಇಲ್ಲಿಯವರೆಗೆ PM ಕಿಸಾನ್ ಸಮ್ಮಾನ್ ಯೋಜನೆಯ ಅಡಿ ಎಷ್ಟು ಕಂತು ಹಣ ಜಮೆಯಾಗಿದೆ?
ಕೇಂದ್ರ ಸರ್ಕಾರವು ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 16 ಕಂತುಗಳ ಹಣವನ್ನು ಅರ್ಹ ಫಲನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ. ಈ ಎಲ್ಲಾ ಕಂತು ಗಳ ಹಣ ಜಮೆಯಾಗಿದೆಯೋ ಅಥವಾ ಇಲ್ಲವೋ ಎಂಬ ಸಂಪೂರ್ಣ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ನೋಡ ಬಹುದಾಗಿದೆ.
ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಎಲ್ಲಾ ಕಂತುಗಳ ವಿವರವನ್ನು ಒಂದೊಂದಾಗಿ ನೋಡಬಹುದಾಗಿದೆ.