ಹಿಂದಿನ ವರ್ಷದ(2022-23) Labour Card Scholarship Status ತಿಳಿದುಕೊಳ್ಳುವುದು ಹೇಗೆ?

ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ (KBOCWWB ) ವತಿಯಿಂದ ಪ್ರತಿ ವರ್ಷವೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು (Labour Card Scholarship ) ನೀಡುತ್ತಾ ಬಂದಿದೆ. ಇದರಿಂದಾಗಿ ಕರ್ನಾಟಕದ ಕಾರ್ಮಿಕರ ಮಕ್ಕಳ ಶೈಕ್ಷಣಿಕವಾಗಿ ಸಹಾಯ ನೀಡಿದಂತಾಗಿದೆ. ಕಾರ್ಮಿಕರ ಎರಡು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿವೇತನವು ದೊರೆಯುತ್ತಿದ್ದೂ ಪ್ರತಿ ವರ್ಷವೂ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತಿದೆ.

2023-24 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ಗೊಂಡಿದ್ದು, ಕೊನೆಯ ದಿನಾಂಕವು ಸನಿಹವಿದೆ. ಆದ್ದರಿಂದ ಬೇಗನೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿಕೊಳ್ಳುವುದು ಸೂಕ್ತವಾಗಿದೆ. 2023-24 ನೇ ಸಾಲಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಶೈಕ್ಷಣಿಕ ಸಹಾಯ ಧನ (ವಿದ್ಯಾರ್ಥಿವೇತನ ).

2022-23 ನೇ ಸಾಲಿನ ವಿದ್ಯಾರ್ಥಿವೇತನದ ಅರ್ಜಿ ಸ್ಥಿತಿ.

ಈಗಾಗಲೇ ಹೇಳಿರುವ ಹಾಗೆ ಕಾರ್ಮಿಕರ ಮಂಡಳಿಯ ವತಿಯಿಂದ ಪ್ರತಿ ವರ್ಷವೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ(Labour Card Scholarship )ನೀಡುತ್ತಾ ಬಂದಿದೆ. ಅಂತೆಯೇ ಹಿಂದಿನ ವರ್ಷ ಎಂದರೆ 2022-23 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದು, ಅರ್ಹ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಿದ್ದರು.

ಅದೇ ಅರ್ಜಿಯ Status ಅಥವಾ ಸ್ಥಿತಿ ತಿಳುಯುವುದು ಹೇಗೆ? ಅರ್ಜಿ ಯಾವ ಹಂತದಲ್ಲಿದೆ? ತಿರಸ್ಕರಿಸಲಾಗಿದೆಯೋ? ಅನುಮೋದಿಸಲಾಗಿದೆಯೋ? ಎಂಬ ಮಾಹಿತಿಗೆ ಈ ಕೆಳಗೆ ಹೇಳಿರುವ ಹಂತವನ್ನು ಪಾಲಿಸುವ ಮೂಲಕ ನಿಮ್ಮ ಅರ್ಜಿಯನ ಸ್ಥಿತಿ ತಿಳಿಯ ಬಹುದು.

Labour card scholarship
  • ಮೊದಲು ನೀವು ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆಯಾದ ನಂತರದಲ್ಲಿ ನೀಡಲಾದ ಸ್ವೀಕೃತಿ ಸಂಖ್ಯೆ (Acknowledgment Number ) ಅನ್ನು ತೆಗೆದು ಕೊಳ್ಳಿ.
  • ನಂತರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನ(KBOCWWB ) ಹೊಸ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಮುಖಪುಟದ ಮೇಲೆ ಇರುವ ‘ Click Here To View Education Assistant Stutus ‘ ಮೇಲೆ ಕ್ಲಿಕ್ ಮಾಡುವುದು.
  • ತದ ನಂತರ ‘Enter Reference Number ‘ ಬಾಕ್ಸ್ ನಲ್ಲಿ ಸ್ವೀಕೃತಿ ಸಂಖ್ಯೆ ಯನ್ನು ನಮೂದಿಸಿ ಚೆಕ್ ಮೇಲೆ ಕ್ಲಿಕ್ ಮಾಡಿ.
  • ಆ ನಂತರ ನಿಮ್ಮ ಅರ್ಜಿಯ ಸ್ಥಿತಿಯೂ ನಿಮಗೆ ತೋರುತ್ತದೆ. ಇದರಿಂದ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ತಿಳಿಯುತ್ತದೆ. ಹಾಗೆಯೇ ನಿಮ್ಮ ಅರ್ಜಿ ಅನುಮೋದನೆ ಆಗಿದೆಯೇ? ಅಥವಾ ತಿರಸ್ಕರಿಸಲ್ಪಟ್ಟಿದೆಯೇ? ಎಂದು ತಿಳಿಯುತ್ತದೆ.
Labour card scholarship

ಈ ವಿದ್ಯಾರ್ಥಿವೇತನದಿಂದ (Labour card scholarship) ಕಾರ್ಮಿಕರ ಮಕ್ಕಳಿಗೆ ಆಗುವ ಪ್ರಯೋಜನ.

ಕಾರ್ಮಿಕರ ಮಕ್ಕಳವು ಆರ್ಥಿಕ ಸ್ಥಿತಿಗತಿಗಳಿಂದಾಗಿ ತಮ್ಮ ಶೈಕ್ಷಣಿಕ ಹಂತವನ್ನು ಅರ್ಧದಲ್ಲೇ ಬಿಡಬಾರದು ಹಾಗೆ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಕಲಿಕಾ ಭಾಗ್ಯ ಎಂಬ ಹೆಸರಿನಡಿ ಈ ಸೌಲಭ್ಯವನ್ನು ಕಾರ್ಮಿಕರ ಮಕ್ಕಳಿಗೆ ಕಲಿಕಾ ಹಂತದಲ್ಲಿ ಒದಗಿಸಿದೆ.

ಮಂಡಳಿಯು ಕಾರ್ಮಿಕರ ಅರ್ಹ ಮಕ್ಕಳಿಗೆ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ಮತ್ತು ಇನ್ನಿತರ ಕೋರ್ಸ್ ಗಳನ್ನು ಒಳಗೊಂಡಂತೆ ಕಲಿಕೆಯಲ್ಲಿ ಒಳಗೊಂಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.

1 thought on “ಹಿಂದಿನ ವರ್ಷದ(2022-23) Labour Card Scholarship Status ತಿಳಿದುಕೊಳ್ಳುವುದು ಹೇಗೆ?”

Comments are closed.