Table of Contents
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆದಂತ KSET 2024 ರ ತಾತ್ಕಾಲಿಕ ಫಲಿತಾಂಶಗಳ ಪಟ್ಟಿಯನ್ನು ಇದೀಗ KEA ಯು ಬಿಡುಗಡೆಗೊಳಿಸಿದೆ. ಇದಕ್ಕೂ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಾತ್ಕಾಲಿಕ ಅಂಕಪಟ್ಟಿಗಳನ್ನು ಬಿಡುಗಡೆಗೊಳಿಸಿತ್ತು. ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ..
KSET 2024 ರ ಪರೀಕ್ಷೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ ಸೆಟ್ 2024ರ ಪರೀಕ್ಷೆಯನ್ನು ದಿನಾಂಕ 13 ಜನವರಿ 2024 ರಂದು ಒಟ್ಟು 41 ವಿಷಯಗಳಿಗೆ OFFLINE ಮೂಲಕ ನಡೆಸಿತ್ತು. ಈ ಪರೀಕ್ಷೆಗೆ ಒಟ್ಟು 1,17,303 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು.ಅದರಲ್ಲಿ 95,201 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಇದರಲ್ಲಿ ಒಟ್ಟು 6,675 ಮಂದಿ ಈ ಬಾರಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು KEA ತಿಳಿಸಿದೆ.
ಇದನ್ನೂ ಓದಿ :- ಗ್ರಾಮ ಆಡಳಿತ ಅಧಿಕಾರಿ ಪರೀಕ್ಷಾ ದಿನಾಂಕ ಪ್ರಕಟ.
ಹಾಗೆಯೇ ಈ ಬಾರಿಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವ್ಯಕ್ತಿಗಳಲ್ಲಿ,3,398 ಪುರುಷರು, 3,180 ಮಹಿಳೆಯರು ಹಾಗೂ 97 ಮಂದಿ ತೃತೀಯ ಲಿಂಗಿಗಳು ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಶೇಕಡಾವಾರು ಫಲಿತಾಂಶವನ್ನು ನೋಡುವುದಾದಲ್ಲಿ, ಪುರುಷರು 50,262 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 41,088 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮತ್ತು ಇದರಲ್ಲಿ ಅರ್ಹತೆ ಪಡೆದವರು 3,398 ಮಂದಿ ಮಾತ್ರ ಅಂದರೆ ಶೇಕಡಾ 8.27.
ಹಾಗೆಯೇ ಮಹಿಳೆಯರಲ್ಲಿ 66,656 ಮಂದಿ ನೋಂದಾಯಿಸಿಕೊಂಡಿದ್ದರು ಅದರಲ್ಲಿ 53,892 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಹಾಜರಾಗಿದ್ದ ಈ ಪೈಕಿಯಲ್ಲಿ 3,180 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಅಂದರೆ ಶೇಕಡಾ 5.90.
ತೃತೀಯ ಲಿಂಗಿ ಅಭ್ಯರ್ಥಿಗಳಲ್ಲಿ 385 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿಮಾಡಿಕೊಂಡಿದ್ದರು ಅದರಲ್ಲಿ 221 ಮಂದಿ ಪರೀಕ್ಷೆಗೆ ಹಾಜರಾಗಿದ್ದು 97 ಮಂದಿ ಅರ್ಹತೆಯನ್ನು ಪಡೆದು ಕೊಂಡಿದ್ದಾರೆ. ಅಂದರೆ ಶೇಕಡಾ 43.89.
ಈ ಬಾರಿಯ ಒಟ್ಟು ಶೇಕಡಾವಾರು ಫಲಿತಾಂಶದಲ್ಲಿ ಅರ್ಹತೆ ಪಡೆದವರ ಶೇಕಡಾವಾರು ಸಂಖ್ಯೆ 7.01 ಮಾತ್ರ.