Table of Contents
ಕರ್ನಾಟಕ ಪರೀಕ್ಷಾ ಪ್ರಾಧಿಕಾರಯು KCET 2024 ರ Result ಯಾವಾಗ ಪ್ರಕಟಿಸುತ್ತಾರೆ ಅನ್ನುವುದು ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುವ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದಂತಾಗಿದೆ.ಈ ಬಾರಿಯ KCET 2024 ರ ಪರೀಕ್ಷೆಯು ನಡೆದು ಒಂದು ತಿಂಗಳು ಕಳೆದಿದೆ. ಇಲ್ಲಿಯವರೆಗೂ ಪರೀಕ್ಷೆಯ ರಿಸಲ್ಟ್ ಬಿಟ್ಟಿಲ್ಲ.ಯಾವಾಗ ಬಿಡಬಹುದು ಎಂಬ ಬಗ್ಗೆ ಮಾಹಿತಿ ದೊರೆತಿದೆ. ತಿಳಿಯಲು ಮುಂದೆ ಓದಿ…
KCET – 24 ರ ರಿಸಲ್ಟ್ ಯಾವಾಗ ಬಿಡಬಹುದು?
Kcet ಫಲಿತಾಂಶ ಬಿಡುಗಡೆಯ ಬಗ್ಗೆ KEA ವತಿಯಿಂದ ಮಾಹಿತಿ ದೊರೆತಿದ್ದು, KEA ಅಧಿಕೃತ X (twitter) ಖಾತೆಯಲ್ಲಿ ಹೇಳಿರುವ ಹಾಗೆ 2nd ಪಿ ಯು ಸಿ 2ನೇ ಪರೀಕ್ಷೆಯ ಫಲಿತಾಂಶ ಮತ್ತು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಯ ಫಲಿತಾಂಶ ಬಂದ ನಂತರ KCET ಫಲಿತಾಂಶ ಪ್ರಕಟಿಸುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ CET ಫಲಿತಾಂಶ ಬಿಡುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಏಕೆಂದರೆ PUC ( ಪಿ ಯು ಸಿ) ಪರೀಕ್ಷೆಯ ಮಾರ್ಕ್ಸ್ ಜೊತೆಗೆ CET ಯಲ್ಲಿ ಪಡೆದ ಅಂಕವನ್ನು ಸೇರಿಸಿ ರಾಂಕಿಂಗ್ ಪಟ್ಟಿ ಸಿದ್ದಪಡಿಸುವುದರಿಂದ. ದ್ವಿತೀಯ ಪಿ ಯು ಸಿ -2 ರ ಫಲಿತಾಂಶ ಪ್ರಕಟವಾದ ನಂತರ KCET ರಿಸಲ್ಟ್ ಬಿಡತ್ತಾರೆ.
ಇದನ್ನೂ ಓದಿ :- 2023-24 ನೇ ಸಾಲಿನ Labour Card Scholarship (ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ) ಕ್ಕೆ ಅರ್ಜಿ.
KCET ಅಂಕ ನಮೂದಿಸುವುದು ಹೇಗೆ?
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು.
- ಮುಖಪುಟದಲ್ಲಿನ ‘ಪ್ರವೇಶ ‘ ಸೆಕ್ಷನ್ ಮೇಲೆ ಕ್ಲಿಕ್ ಮಾಡುವುದು.
- ನಂತರ UGCET 2024 Marks Entry ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ನ್ನು ಆಗಿ. ನಿಮ್ಮ ಅಂಕವನ್ನು ನಮೂದಿಸಬಹುದು.
KCET 2024 ರ ಫಲಿತಾಂಶ ಹೇಗೆ ಚೆಕ್ ಮಾಡುವುದು?
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು.
- ಮುಖಪುಟದಲ್ಲಿನ ‘ಪ್ರವೇಶ ‘ ಸೆಕ್ಷನ್ ಮೇಲೆ ಕ್ಲಿಕ್ ಮಾಡುವುದು.
- ನಂತರ UGCET 2024 ಮೇಲೆ ಕ್ಲಿಕ್ ಮಾಡಿ.
- KCET 2024 Result ಮೇಲೆ ಕ್ಲಿಕ್ ಮಾಡುವುದು.
- ನಂತರ ನೋಂದಣಿ ಸಂಖ್ಯೆ ಮತ್ತು ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರವನ್ನು ನಮೂದಿಸುವುದರ ಮೂಲಕ ನಿಮ್ಮ ಫಲಿತಾಂಶವನ್ನು ನೋಡಿಕೊಳ್ಳಬಹುದು.
ಇದನ್ನೂ ನೋಡಿ :- https://youtu.be/LOPLrHkOZ7g