ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸದಸ್ಯತ್ವ ಪಡೆದ ಅಥವಾ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕನಿಗೆ ಮಂಡಳಿಯು ಹಲವಾರು ಯೋಜನೆಗಳು ಸೌಲಭ್ಯಗಳನ್ನು ನೀಡುತ್ತಿದ್ದೂ, ದೇಶ ಕಟ್ಟಲು ಕಾರ್ಮಿಕನ ಪಾತ್ರವೂ ಅತಿ ಮುಖ್ಯವಾಗಿರುವುದರಿಂದ ಕರ್ನಾಟಕ ಸರ್ಕಾರವು ಕಾರ್ಮಿಕರ ಹಿತ ರಕ್ಷಣೆಗೆ ಮಂಡಳಿಯನ್ನು ಸ್ಥಾಪಿಸಿದೆ. ಆದ್ದರಿಂದಲೇ ಕರ್ನಾಟಕ ಸರ್ಕಾರದ ಕಟ್ಟಡ ಕಾರ್ಮಿಕರ ಮಂಡಳಿಯು ಕಾರ್ಮಿಕನ  ತೊಂದರೆಯನ್ನು ಅರಿತು ಹಲವು ಬಗೆಯ ಯೋಜನೆಗಳನ್ನು ಜಾರಿಗೋಳಿಸಿದೆ.ಅದರಲ್ಲಿ ಅತಿ ಮುಖ್ಯವಾಗಿ ಪಿಂಚಣಿ ಸೌಲಭ್ಯ ಯೋಜನೆಯು ಒಂದಾಗಿದೆ. ಅದರ ಬಗ್ಗೆ  ತಿಳಿದುಕೊಳ್ಳೋಣ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಪಿಂಚಣಿ ಯೋಜನೆ

ಕಟ್ಟಡ ಕಾರ್ಮಿಕ ಪಿಂಚಣಿ ಯೋಜನೆಯ ಬಗ್ಗೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕನು 60 ವರ್ಷದ ನಂತರದ ಜೀವನ ನಡೆಸಲು ಅನುವು ಮಾಡಿಕೊಡಲು ಕಟ್ಟಡ ಕಾರ್ಮಿಕರ ಮಂಡಳಿಯು ನೊಂದಣಿಯಾದ ಕಾರ್ಮಿಕನಿಗೆ ಈ ಬಗೆಯ ಸೌಲಭ್ಯವನ್ನು  ನೀಡುತ್ತಿದೆ.

ಪಿಂಚಣಿ ಯೋಜನೆ ಪಡೆಯಲು ನಿಯಮಗಳು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಪಿಂಚಣಿ ಪಡೆಯಲು ಕಾರ್ಮಿಕನಿಗೆ ಹಲವು ನಿಯಮಗಳನ್ನು ತಿಳಿಸಿದೆ ಅದರಲ್ಲಿ ಮುಖ್ಯವಾಗಿ..

  • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತನಾದ ಪ್ರತಿ ಕಾರ್ಮಿಕನು ಈ ಯೋಜನೆಯ ಸೌಲಭ್ಯ ಪಡೆಯಲು 60 ವರ್ಷ ವಯೋಮಿತಿ ಅಥವಾ ವಯಸ್ಸು ಪೂರ್ಣಗೊಂಡಿರಬೇಕು.
  • 60 ವರ್ಷ ಪೂರ್ಣಗೊಂಡ ಕಾರ್ಮಿಕನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮಂಡಳಿಯ ಮಾನ್ಯವಾದ ಕಾರ್ಮಿಕರ ಕಾರ್ಡ್ ಅನ್ನು ಹೊಂದಿರಬೇಕು.
  • ನೋಂದಾಯಿತ ಅರ್ಜಿ ಸಲ್ಲಿಸುವ ಸಮಯದಲ್ಲಿ 60 ವರ್ಷ ಪೂರ್ಣಗೊಳ್ಳುವ ಮೊದಲು ಕನಿಷ್ಠ ಮೂರು ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ( Required Documents ).

ಪಿಂಚಣಿ ಸೌಲಭ್ಯ ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು

ಈ ಮೇಲೆ ಹೇಳಿರುವಂತೆ ಎಲ್ಲಾ ನಿಯಮಗಳನ್ನು ಹೊಂದಿರುವ ಕಾರ್ಮಿಕನು ತನ್ನ ದಾಖಲೆಗಳೊಂದಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಬೇಕು.

  • ಪಿಂಚಣಿ ಯೋಜನೆಗೆ ಅರ್ಹರಾದ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯ ಅಧಿಕೃತ KBOCWWB ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವಾಗ ಅಧಿಕೃತ ಮೂಲ ಗುರುತಿನ ಚೀಟಿ ಅಥವಾ ಮಾನ್ಯವಾದ ಕಾರ್ಮಿಕರ ಕಾರ್ಡ್ ಹೊಂದಿರಬೇಕು.
ಕಟ್ಟಡ ಕಾರ್ಮಿಕ

ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆಯ ಹಂತ

ಮೇಲೆ ಹೇಳಿರುವ ಹಾಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿದ ಕಾರ್ಮಿಕನ ಅರ್ಜಿಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸುತ್ತಾರೆ.

ನೀವು ನೀಡಿದ ಎಲ್ಲಾ ಮಾಹಿತಿಯು ಸತ್ಯವೆಂದು ಮತ್ತು ನೀವು ಎಲ್ಲಾ ನಿಯಮಗಳನ್ನು ಹೊಂದಿರುವ ವ್ಯಕಿಯೆಂದು ಖಾತ್ರಿಯಾದ ನಂತರ ಅರ್ಜಿಯನ್ನು ವಿಲೇವಾರಿ ಮಾಡುತ್ತಾರೆ.

ಮಂಡಳಿಯು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕನು ಪಿಂಚಣಿ ಯೋಜನೆ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನಂತರ, ಫಲಾನುಭವಿಗೆ ಪಿಂಚಣಿ ಮಂಜೂರಾತಿಯ ಆದೇಶದ ಜೊತೆಗೆ ವಿದ್ಯುನ್ಮಾನಿಕೃತ ವಿಶಿಷ್ಟ ಪಿಂಚಣಿ ಗುರುತಿನ ಚೀಟಿಯನ್ನು ನೀಡಬೇಕು.

ಫಲಾನುಭವಿ ಕಾರ್ಮಿಕನು ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನಾ ಸಂದರ್ಭದಲ್ಲಿ ಅರ್ಜಿಯು ಅನರ್ಹ ಎಂದು ಕಂಡು ಬಂದಲ್ಲಿ, ಅರ್ಜಿಯನ್ನು ತಿರಸ್ಕರಿಸಲಾಗುವುದು.

ನೋಂದಾಯಿತ ಫಲಾನುಭವಿ ಕಾರ್ಮಿಕನು ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷವೂ ಕೂಡ ಜೀವಿತ ಪ್ರಮಾಣ ಪತ್ರ, ನಮೂನೆ XIV –A (living certificate form XIV –A) ಅನ್ನು ಮಂಡಳಿಯ ವೆಬ್ಸೈಟ್ ನಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.

ಇದನ್ನೂ ನೋಡಿ :- https://youtu.be/bsGKl0K47Sk

ಎಷ್ಟು ಹಣವನ್ನು ಪಿಂಚಣಿ ಯೋಜನೆಯಡಿ ನೀಡುತ್ತಾರೆ

ನೋಂದಾಯಿತ ಫಲಾನುಭವಿ ಕಾರ್ಮಿಕನು ಸಲ್ಲಿಸಿದ ಅರ್ಜಿಯು ಅನುಮೋದನೆಗೊಂಡಲ್ಲಿ (Approved ) ಪಿಂಚಣಿಯ ಮೊತ್ತವು ಮಾಸಿಕ( ತಿಂಗಳಿಗೆ ) ರೂ 3000/-ಗಳನ್ನು ಮೀರತಕ್ಕದಲ್ಲ, ಮತ್ತು ಫಲಾನುಭವಿಯು ಸರ್ಕಾರದ ಇತರೆ ಯೋಜನೆಯಡಿ ಇದೇ ತರಹದ ಯಾವುದೇ ಸೌಲಭ್ಯವನ್ನು ಪಡೆದಿರಬಾರದು.

ಫಲಾನುಭವಿಯು ಮರಣ ಹೊಂದಿದ್ದಲ್ಲಿ – ಪಿಂಚಣಿ ಯೋಜನೆ

ಫಲಾನುಭವಿ ಪಿಂಚಣಿದಾರನು ಮರಣ ಹೊಂದಿದಾಗ, ಅವರ ಕಾನೂನುಬದ್ದ ಅವಲಂಬಿತರು ಅಥವಾ ಉತ್ತರಾಧಿಕಾರಿಗಳು ಅಥವಾ ನಾಮನಿರ್ದೇಶೀತರು ಪಿಂಚಣಿದಾರರ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ ಪಿಂಚಣಿ ಮುಚ್ಚಲು ಮಂಡಳಿಗೆ ತಿಳಿಸಬೇಕು.

2 thoughts on “ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು”

Comments are closed.