2023-24 ನೇ ಸಾಲಿನ Labour Card Scholarship (ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ) ಕ್ಕೆ ಅರ್ಜಿ.

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ( Labour card Scholarship ) ವನ್ನು ನೀಡುತೀದ್ದು, ಈ ಬಾರಿಯ (2023-24 ನೇ ಸಾಲಿನ) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದೆ.

ಕಾರ್ಮಿಕರ ಮಕ್ಕಳ ಆರ್ಥಿಕ ಸ್ಥಿತಿಗತಿಗಳಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯಬಾರದೆಂದು ಕರ್ನಾಟಕ ಸರ್ಕಾರವೂ ಪ್ರತಿ ವರ್ಷ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ( Labour card Scholarship ) ಎಂಬ ಹೆಸರಿನಡಿ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ.

ಅರ್ಜಿ ಸಲ್ಲಿಸುವ ಬಗೆ ಹೇಗೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಮಾನದಂಡ ಏನು? ನಿಯಮ ಮತ್ತು ಷರತ್ತುಗಳೇನು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದೂ? ಈ ಬಾರಿ ಎಷ್ಟು ಹಣ ಬರುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ತಿಳಿದುಕೊಳ್ಳುತ್ತಾ ಹೋಗೋಣ…

ಹೇಗೆ ಅರ್ಜಿ ಸಲ್ಲಿಸುವುದು?

ಕಳೆದ ವರ್ಷ ಅಂದರೆ 2022-23 ನೇ ಸಾಲಿನಲ್ಲಿ ಮಂಡಳಿಯು ವಿದ್ಯಾರ್ಥಿವೇತನಕ್ಕಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಯನ್ನು ಆಹ್ವಾನಿಸ್ಸಿತ್ತು, ಆದರೆ ಈ ವರ್ಷ SSP ಪೋರ್ಟಲ್‌ನಲ್ಲಿ 2023-24 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕಾಗಿ ( Labour card Scholarship ) ಅರ್ಜಿಯನ್ನು ಪ್ರಾರಂಭಿಸಲಾಗಿದೆ.

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (State Scholarship Portal ) ನಲ್ಲಿ ಪ್ರತಿವರ್ಷ ಅರ್ಜಿ ಸಲ್ಲಿಸುವ ಹಾಗೆಯೇ ಈ ವರ್ಷವೂ ಸಲ್ಲಿಸುವುದು ಈ ವರ್ಷ ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿಯ ಸದಸ್ಯತ್ವ ಪಡೆದ ಕಾರ್ಮಿಕರ ಮಕ್ಕಳೇ? ಎಂಬ ಪ್ರಶ್ನೆ ಕೇಳುತ್ತಾರೆ, ನಿಮ್ಮ ತಂದೆ ಅಥವಾ ತಾಯಿ ಕಾರ್ಮಿಕ ಮಂಡಳಿಯ ಕಾರ್ಡ್ ಹೊಂದಿದ್ದಲ್ಲಿ’ yes ‘ಎಂದು ಉತ್ತರಿಬೇಕು, ಇಲ್ಲವಾದಲ್ಲಿ ‘No ‘ಎಂದು ಉತ್ತರಿಸಬೇಕು.

Labour Card Scholarship

ವಿದ್ಯಾರ್ಥಿವೇತನದ(Scholarship )ಷರತ್ತುಗಳು

  • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ನೋಂದಾಯಿತನಾಗಿರಬೇಕು.
  • ಕಾರ್ಮಿಕರ ಇಬ್ಬರು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು.
  • ಅರ್ಜಿ ಸಲ್ಲಿಸುವಾಗ labour card ಮಾನ್ಯವಾಗಿರಬೇಕು.
  • ಈ ವರ್ಷ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಉತ್ತಿರ್ಣನಾಗಿರಬೇಕು.
  • 2023-24 ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಯು ದಾಖಲಾಗಿರಬೇಕು.
  • ಕರ್ನಾಟಕ ರಾಜ್ಯದಲ್ಲಿ ಭೌತಿಕವಾಗಿ ಆರಂಭವಾಗಿರುವ ಹಾಗೂ ಸರ್ಕಾರದಿಂದ ನೋಂದಾಯಿತ ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಗಳ 02 ಮಕ್ಕಳಿಗೆ ಮಾತ್ರ ಶೈಕ್ಷಣಿಕ ಸಹಾಯಧನವನ್ನು ನೀಡಬಹುದಾಗಿರುತ್ತದೆ.
  • ದೂರ ಶಿಕ್ಷಣ, ಆನ್ ಲೈನ್ ಶಿಕ್ಷಣ, ಹೋಂ ಸ್ಟಡಿ, ಇತ್ಯಾದಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಪಡೆಯಲು ಅವಕಾಶ ಇರುವುದಿಲ್ಲ

ವಿದ್ಯಾರ್ಥಿವೇತನದ(Scholarship )ನಿಯಮಗಳು

  • SSP ಸ್ಕಾಲರ್‌ಶಿಪ್ ಅರ್ಜಿಯ ಪರಿಗಣನೆಗಾಗಿ ಕಾರ್ಮಿಕರು ಕಡ್ಡಾಯವಾಗಿ ತಮ್ಮ ಸೇವಾ ಸಿಂಧು ಲೇಬರ್ ಕಾರ್ಡ್ ಅನ್ನು KBOCWWB ಯಲ್ಲಿ 30/06/2024 ರ ಮೊದಲು ಅಪ್ಡೇಟ್ ಮಾಡಿಕೊಳ್ಳಬೇಕು.
  • 31/05/2023 ರ ಮೊದಲು ನೋಂದಾಯಿಸಿದ ಲೇಬರ್ ಕಾರ್ಡ್ ವಿದ್ಯಾರ್ಥಿವೇತನವನ್ನು ( Labour card Scholarship ) ಪಡೆಯಲು ಅರ್ಹವಾಗಿದೆ.ನಂತರ ನೋಂದಣಿ ಆಗಿರುವ ಕಾರ್ಡ್ದಾರರು ಸ್ಕಾಲರ್ಷಿಪ್ ಅರ್ಜಿ ಸಲ್ಲಿಕೆ ಮಾಡಿದರು ಪರಿಗಣಿಸಲಾಗುವುದಿಲ್ಲ.
  • ನೋಂದಾಯಿತ ಕಾರ್ಮಿಕರ ಬ್ಯಾಂಕ್ ಖಾತೆಯೊಂದಿಗೆ NPCI ಆಧಾರ್‌ ಮ್ಯಾಪಿಂಗ್ ಆಗಿರಬೇಕು. ಮ್ಯಾಪಿಂಗ್ ಆಗಿಲ್ಲ ಎಂದರೆ ಕಾರ್ಮಿಕರು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಬೇಕು.
  • ಹಾಗೂ ಮಂಡಳಿಯಿಂದ ನೀಡಲಾದ ಇತರ ನಿಯಮ ಮತ್ತು ಷರತ್ತುಗಳು.

ಯಾವಾಗ ಅರ್ಜಿ ಸಲ್ಲಿಕೆ ಪ್ರಾರಂಭ?

2023-24 ನೇ ಸಾಲಿನ ಅರ್ಜಿ ಸಲ್ಲಿಕೆಯು ಈಗಾಗಲೇ ಪ್ರಾರಂಭವಾಗಿದೆ. ಈ ವರ್ಷ ಯಾವೆಲ್ಲಾ ವಿದ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ತರಗತಿಗಳಿಗೆ ಪ್ರವೇಶ ಪಡೆದು ಕೊಂಡಿರುವಿರೋ ಅವರು ಈ ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

Labour card scholarship ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು

  • ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ನಿಮ್ಮ ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದೇ ನಮೂಡಿಸುವುದು.
  • ಸುಳ್ಳು ಮಾಹಿತಿಯನ್ನು ನೀಡಬಾರದು.
  • ನಿಮ್ಮ ಎಲ್ಲಾ ದಾಖಲಾತಿ (Documents ) ಮಾನ್ಯವಾಗಿತ್ತುಕೊಂಡು ಅರ್ಜಿ ಸಲ್ಲಿಸುವುದು, ಉದಾಹರಣೆಗೆ ನಿಮ್ಮ ಕಾರ್ಮಿಕರ ಕಾರ್ಡ್ ಮಾನ್ಯವಾದ ಅವಧಿ ಮುಕ್ತಾಯಗೊಂಡಿರಬಹುದು ನೋಡಿಕೊಂಡು ಅರ್ಜಿ ಸಲ್ಲಿಸುವುದು.
  • ಒಂದು ವೇಳೆ ವ್ಯಾಲಿಡಿಟಿ ಮುಕ್ತಾಯಗೊಂಡಿದ್ದಲ್ಲಿ, ನಿಮ್ಮ ಕಾರ್ಡ್ ಮಾನ್ಯ ಮಾಡಿಸಿಕೊಂಡು ನಂತರ scholarship ಗೆ ಅರ್ಜಿ ಸಲ್ಲಿಸುವುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ

ಎಸ್‌ಎಸ್‌ಪಿಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/05/2024 ಆಗಿರುತ್ತದೆ, ವಿದ್ಯಾರ್ಥಿಯು 2023-24 ರ ಸಾಲಿನ ವಿದ್ಯಾರ್ಥಿವೇತನಕ್ಕೆ SSP ಮೂಲಕ ಇತರ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೆ ಅವರು ಮತ್ತೆ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.

ಈಗಾಗಲೇ ಹೇಳಿರುವ ಹಾಗೆ SSP ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ 31/05/2024 ಆದರೆ ನಿಮ್ಮ ಲೇಬರ್ ಕಾರ್ಡ್ ಅನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಹೊಸ ವೆಬ್ಸೈಟ್ ( KBOCWWB ) ಯಲ್ಲಿ ದಿನಾಂಕ 30/06/2024 ರ ಒಳಗಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕು.

ಯಾವ ತರಗತಿಯವರಿಗೆ ಎಷ್ಟು ಹಣ ಬರುತ್ತದೆ?

ವಿದ್ಯಾಭ್ಯಾಸದ ವಿವರ (ತರಗತಿ ಅಥವಾ ಕೋರ್ಸ್ )ವಾರ್ಷಿಕ ಶೈಕ್ಷಣಿಕ ಧನ ಸಹಾಯ (ರೂ.. ಗಳಲ್ಲಿ )
1 ನೇ ತರಗತಿ ಇಂದ 5ನೇ ತರಗತಿ ಯಲ್ಲಿ ಓದುತ್ತಿರುವ ಮಕ್ಕಳಿಗೆ1800
6ನೇ ತರಗತಿಯಿಂದ 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ2400
9ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ3000
ಪ್ರಥಮ ಪಿ. ಯು ಸಿ ಮತ್ತು ದ್ವಿತೀಯ ಪಿ. ಯು ಸಿ ಓದುತ್ತಿರುವ ಮಕ್ಕಳಿಗೆ4600
ಪದವಿ (ಗರಿಷ್ಠ ಮೂರು ವರ್ಷ )ಓದುತ್ತಿರುವ ಮಕ್ಕಳಿಗೆ10000
ಬಿ ಇ /ಬಿ ಟೆಕ್ ಅಥವಾ ತತ್ಸಮಾನ ತಾಂತ್ರಿಕ ಪದವಿ ಓದುತ್ತಿರುವ ಮಕ್ಕಳಿಗೆ10000
ಸ್ನಾತಕೋತ್ತರ ಪದವಿ (ಗರಿಷ್ಠ ಎರಡು ವರ್ಷ ) ಓದುತ್ತಿರುವ ಮಕ್ಕಳಿಗೆ10000
ಪಾಲಿಟೆಕ್ನಿಕ್ ಅಥವಾ ಡಿಪ್ಲೋಮ ಅಥವಾ ಐ ಟಿ ಐ ಓದುತ್ತಿರುವ ಮಕ್ಕಳಿಗೆ4500
ಬಿ ಎಸ್ಸಿ ನರ್ಸಿಂಗ್ / ಜಿ ಎನ್ ಎಂ / ಪ್ಯಾರ ಮೆಡಿಕಲ್ ಕೋರ್ಸ್ ಓದುತ್ತಿರುವ ಮಕ್ಕಳಿಗೆ10000
ಬಿ ಎಡ್ ಓದುತ್ತಿರುವ ಮಕ್ಕಳಿಗೆ6000
ವೈದ್ಯಕೀಯ ಕೋರ್ಸ್ ಓದುತ್ತಿರುವ ಮಕ್ಕಳಿಗೆ11000
ಎಲ್ ಎಲ್ ಬಿ /ಎಲ್ ಎಲ್ ಎಂ ಓದುತ್ತಿರುವ ಮಕ್ಕಳಿಗೆ10000
ಎಂ ಇ /ಎಂ ಟೆಕ್ (ಗರಿಷ್ಠ ಎರಡು ವರ್ಷ )ಓದುತ್ತಿರುವ ಮಕ್ಕಳಿಗೆ10000
ಎಂ ಡಿ ಮೆಡಿಕಲ್ ಓದುತ್ತಿರುವ ಮಕ್ಕಳಿಗೆ12000
ಪಿ ಹೆಚ್ ಡಿ /ಎಂ ಫಿಲ್ (ಗರಿಷ್ಠ ಮೂರು ವರ್ಷ )11000
2023-24 Academic Year Scholarship Amount

SSP ತಂತ್ರಾಂಶ ಅಥವಾ Labour card Scholarship ಬಗ್ಗೆ ಹೆಚ್ಚಿನ ಮಾಹಿತಿಗೆ

  • SSP ಯಲ್ಲಿನ ಯಾವುದೇ ತಾಂತ್ರಿಕ/ಇತರೆ ಸಹಾಯಕ್ಕಾಗಿ SSP ಸಹಾಯವಾಣಿ ಸಂಖ್ಯೆ: 1902 ಅನ್ನು ಸಂಪರ್ಕಿಸಬಹುದು.
  • Labour Card Scholarship ಗೆ ಸಂಬಂಧಿಸಿದ ಸಹಾಯಕ್ಕಾಗಿ ಹತ್ತಿರದ Labour office ಅಥವಾ ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಿ.

ಇದನ್ನೂ ಓದಿ :- Post Office – ಈ 08 ಸ್ಕೀಮ್ ಗಳ ಬಗ್ಗೆ ಗೊತ್ತಿರಲೇ ಬೇಕು.

ಇದನ್ನೂ ನೋಡಿ :-