Table of Contents
Village Accountant ಅಥವಾ ಗ್ರಾಮ ಲೆಕ್ಕಿಗ (ಗ್ರಾಮ ಲೆಕ್ಕಧಿಕಾರಿ ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 1000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.ಒಮ್ಮೆ ಕೊನೆ ದಿನಾಂಕವನ್ನು ವಿಸ್ತರಿಸಿ ಇಂದು ಅಂದರೆ 15/05/2024 ಅರ್ಜಿ ಸಲ್ಲಿಸಲು ಕೊನೆ ದಿನವಾಗಿ ನಿಗದಿಪಡಿಸಲಾಗಿದೆ.
ಈ ಹುದ್ದೆಯ ಅಧಿಸೂಚನೆ? ಎಷ್ಟು ಹುದ್ದೆಗಳಿವೆ?ನೇಮಕಾತಿ ನಡೆಯುವ ಬಗೆ? ವೇತನ? ವಿದ್ಯಾರ್ಹತೆ ಏನು? ಹೀಗೆ ಹುದ್ದೆಯ ಬಗ್ಗೆ ಪೂರ್ಣ ವಿವರಣೆ ನೋಡಲು ಮುಂದೆ ಓದಿ….
Village Accontant ಹುದ್ದೆಯ ಬಗ್ಗೆ
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಡಿ ಕಾರ್ಯ ನಿರ್ವಹಿಸುವಗ್ರಾಮ ಲೆಕ್ಕಧಿಕಾರಿ ಅಥವಾ ‘ Village Administrative Officer ‘ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಹುದ್ದೆಯು ಕರ್ನಾಟಕದ ಮನೆ ಮನೆ ಗೂ ಚಿರಪರಿಚಿತವಾದ ಸರ್ಕಾರಿ ಹುದ್ದೆ ಯಾಗಿರುತ್ತದೆ, ಏಕೆಂದರೆ ಜನರ ನಡುವೆ ಇದ್ದೂ ಜನರಿಗೆ ಸರ್ಕಾರದ ಸೌಲಭ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಇವರೇ ಮಾಡುವುದರಿಂದ ಎಲ್ಲರಿಗೂ ಪರಿಚಿತವಾದಗಿರುವ ಹುದ್ದೆ ಎಂದರೆ ತಪ್ಪಾಗಲಾರದು.
ಇಲಾಖೆ
ಆಗಲೇ ಹೇಳಿದಂತೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಧಿಕಾರಿಯು ಕಾರ್ಯ ನಿರ್ವಹಿಸಬೇಕಾಗುತ್ತದೆ.
ಒಟ್ಟು ಎಷ್ಟು ಹುದ್ದೆಗಳಿವೆ?
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ(ಸ್ಥಳೀಯ ) ವೃಂದದಲ್ಲಿರುವ ಒಟ್ಟು 1000 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examination Authority) ದಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವೇತನ ಶ್ರೇಣಿ ಏನು ?
ಹುದ್ದೆಯ ಹೆಸರು | ವೇತನ |
ಗ್ರಾಮ ಆಡಳಿತ ಅಧಿಕಾರಿ | 21,400 – 42,000 |
ಶೈಕಣಿಕ ವಿದ್ಯಾರ್ಹತೆ ಏನು?
ದ್ವಿತೀಯ PUC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.(ಇಲ್ಲಿ ಹೇಳಿರುವ ತತ್ಸಮಾನ ವಿದ್ಯಾರ್ಹತೆ ಬಗ್ಗೆ Notification Pdf ನಲ್ಲಿ ವಿವರವಾಗಿ ನೀಡಲಾಗಿದೆ. ಅದನ್ನು ನೋಡಿಕೊಳ್ಳತಕ್ಕದ್ದು )
ವಯೋಮಿತಿ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಮತ್ತು ಗರಿಷ್ಠ ವಯೋಮಿತಿಯು,
Village Accountant – Category ವಾರು ವಯೋಮಿತಿ
ಅಭ್ಯರ್ಥಿಗಳು | ಗರಿಷ್ಠ ವಯೋಮಿತಿ |
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು | 35 ವರ್ಷಗಳು |
ಪ್ರವರ್ಗ 2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳಿಗೆ | 38 ವರ್ಷಗಳು |
SC,ST ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ | 40 ವರ್ಷಗಳು |
ಇದನ್ನೂ ಓದಿ :-KAS 2024 – ಹೇಗೆ ಇರುತ್ತೆ ಪರೀಕ್ಷೆ? (Gazetted professioners examination)
ಶುಲ್ಕ ಪಾವತಿ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಮತ್ತು ಪ್ರವರ್ಗ – 2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳಿಗೆ | 750 ರೂ |
SC,ST, ಪ್ರವರ್ಗ 1 ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ | 500ರೂ |
Village Administrative Officer ಪರೀಕ್ಷೆಯ ಬಗ್ಗೆ
ಈ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು Off-line OMR ಮೂಲಕ ನಡೆಸಲಾಗುವುದು, ಈ ಪರೀಕ್ಷೆಯಲ್ಲಿ 2 ಪತ್ರಿಕೆ ಇರಲಿದ್ದು ಪತ್ರಿಕೆ-1 ಸಾಮಾನ್ಯ ಜ್ಞಾನ ಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿರಲಿದ್ದೂ 100 ಅಂಕದ ಪ್ರಶ್ನೆ ಇರುತ್ತದೆ ಮತ್ತು 2 ಗಂಟೆಗಳ ಸಮಯವಕಾಶ ನೀಡಿರುತ್ತಾರೆ, ಹಾಗೆಯೇ ಪತ್ರಿಕೆ – 2 ಕೂಡ ಸಂವಹನ ಪತ್ರಿಕೆಯಾಗಿದ್ದು (ಅ ) ಸಾಮಾನ್ಯ ಕನ್ನಡ (ಆ ) ಸಾಮಾನ್ಯ ಇಂಗ್ಲಿಷ್ (ಇ ) ಕಂಪ್ಯೂಟರ್ ಜ್ಞಾನ ಕ್ಕೆ ಸಂಬಂಧಿಸಿದ 100 ಅಂಕದ ಪ್ರಶ್ನೆಗಳಿದ್ದು 2 ಗಂಟೆಯ ಸಮಯವಕಾಶ ನೀಡಿರುತ್ತದೆ. ಮುಖ್ಯವಾಗಿ ಈ ಪತ್ರಿಕೆಗಳು ಋಣಾತ್ಮಕ ಅಂಕವನ್ನು(Negetive Marking )ಹೊಂದಿರುತ್ತದೆ.
ಅರ್ಜಿ ಸಲ್ಲಿಕೆ ಮುಂದೂಡಿಕೆಯ ಬಗ್ಗೆ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ದಿನಾಂಕ 04/05/2024 ಕೊನೆಯ ದಿನವನ್ನಾಗಿ ನಿಗದಿಪಡಿಸಿದ್ದರೂ, ಕೆಲವು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವ ಕಾರಣ ಪ್ರಾಧಿಕಾರವು ಈ ದಿನಾಂಕವನ್ನು 15/05/2024 ಕ್ಕೆ ಕೊನೆಯ ದಿನವನ್ನಾಗಿ ಮುಂದೂಡಲಾಗಿದೆ.
ಇದನ್ನೂ ನೋಡಿ :- https://youtu.be/xPsOlCoPgOk