ಸುಮಾರು 45000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ.

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದೂ, ಇದೀಗ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಯಿಂದ ಈ ಕೊರತೆಯನ್ನು ನೀಗಿಸಲು ಮತ್ತು 2024-25 ನೇ ಶೈಕ್ಷಣಿಕ ವರ್ಷದ ಶಾಲಾ ಪಠ್ಯಕ್ರಮವನ್ನು ಸರಿಯಾಗಿ ಭೋದಿಸುವ ಸಲುವಾಗಿ ನೇಮಕಾತಿಗೆ ಮುಂದಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಈ ಬಾರಿಯ ಶಿಕ್ಷಕರ ನೇಮಕಾತಿಯ ಆದೇಶ ಹೊರಡಿಸಿರುವ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಟ್ಟು ಸರಿಸುಮಾರು 45000 ಕ್ಕೂ ಹೆಚ್ಚಾಗಿನ ಹುದ್ದೆಗಳಿಗೆ, ಸರ್ಕಾರ ಅನುಮತಿಯನ್ನು ನೀಡಿದೆ.

ಶೀಘ್ರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶವೇಕೆ?

ರಾಜ್ಯದಲ್ಲಿನ ಹೆಚ್ಚಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆಯಿಂದಾಗಿ ಹಾಗೆಯೇ ವಿಷಯವಾರು ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದಾಗಿ ಶೈಕ್ಷಣಿಕ ವರ್ಷದಲ್ಲಿ ಸರಿಯಾದ ರೀತಿಯಲ್ಲಿ ಪಠ್ಯಕ್ರಮ ಭೋದನೆಮಾಡಲು ಕಷ್ಟವಾಗುತ್ತಿದ್ದವು ಎಂದು ತಿಳಿದು ಬಂದ ಮಾಹಿತಿಯಾಗಿದೆ.ಇದೆ ಕಾರಣಕ್ಕಾಗಿ ಈ ಸಾಲಿನ ಅಂದರೆ 2024-25 ರ ಶೈಕ್ಷಣಿಕ ವರ್ಷದ ಪಠ್ಯ ಭೋದನೆಗೆ ಸಹಾಯಕ ವಾಗಲು ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.

ಅತಿಥಿ ಶಿಕ್ಷಕ

ಎಷ್ಟು ಹುದ್ದೆ ನೇಮಕಕ್ಕೆ ಆದೇಶವಾಗಿದೆ?

ರಾಜ್ಯದ ಪ್ರಾಥಮಿಕ ಶಾಲೆಯ ಸರಿಸುಮಾರು 35000 ಶಿಕ್ಷಕರ ಮತ್ತು ಪ್ರೌಢ ಶಾಲೆಯ ಸರಿಸುಮಾರು 10000 ಶಿಕ್ಷಕರ ಕೊರತೆ ನೀಗಿಸಲು ಒಟ್ಟು ಸರಿಸುಮಾರು 45000 ಹುದ್ದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ :-ಗ್ರಾಮ ಆಡಳಿತ ಅಧಿಕಾರಿ ಪರೀಕ್ಷಾ ದಿನಾಂಕ ಪ್ರಕಟ.

ಶಿಕ್ಷಕ ವೃತ್ತಿಯನ್ನು ಬಯಸುವ ಅಭ್ಯರ್ಥಿಗೆ ಇದು ಸುವರ್ಣವಕಾಶ.

ಕರೋನ ಮಹಾಮಾರಿಯ ನಂತರದಲ್ಲಿ ನೇಮಕಾತಿವು ಕುಂಟಿತಗೊಂಡಿದ್ದು, ತದನಂತರದಲ್ಲಿ ಚುನಾವಣೆಯ ಕಾರಣಗಳಿಂದಾಗಿ ನೇಮಕಾತಿಯು ಕಡಿಮೆಯಾಗಿತ್ತು, ಇದೀಗ ಕರ್ನಾಟಕ ಸರ್ಕಾರವು ನೇಮಕಾತಿಯ ಆದೇಶವನ್ನು ಹೊರಡಿಸುತ್ತಿದ್ದೂ, ಇದೀಗ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ದೊರೆತಿದ್ದು, ಶಿಕ್ಷಕ ವೃತ್ತಿಯನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಸಕಲವಾಗಿದೆ. ದೊಡ್ಡ ಪ್ರಮಾಣದ ಹುದ್ದೆಗೆ ಆದೇಶ ದೊರೆತಿದ್ದು ನಿಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು.

ಇದನ್ನೂ ಓದಿ :-KSET 2024 ರ ತಾತ್ಕಾಲಿಕ ಫಲಿತಾಂಶಗಳ ಪಟ್ಟಿ ಪ್ರಕಟ.