Table of Contents
ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ( Labour card Scholarship ) ವನ್ನು ನೀಡುತೀದ್ದು, ಈ ಬಾರಿಯ (2023-24 ನೇ ಸಾಲಿನ) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದೆ.
ಕಾರ್ಮಿಕರ ಮಕ್ಕಳ ಆರ್ಥಿಕ ಸ್ಥಿತಿಗತಿಗಳಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯಬಾರದೆಂದು ಕರ್ನಾಟಕ ಸರ್ಕಾರವೂ ಪ್ರತಿ ವರ್ಷ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ( Labour card Scholarship ) ಎಂಬ ಹೆಸರಿನಡಿ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ.
ಅರ್ಜಿ ಸಲ್ಲಿಸುವ ಬಗೆ ಹೇಗೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಮಾನದಂಡ ಏನು? ನಿಯಮ ಮತ್ತು ಷರತ್ತುಗಳೇನು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದೂ? ಈ ಬಾರಿ ಎಷ್ಟು ಹಣ ಬರುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ತಿಳಿದುಕೊಳ್ಳುತ್ತಾ ಹೋಗೋಣ…
ಹೇಗೆ ಅರ್ಜಿ ಸಲ್ಲಿಸುವುದು?
ಕಳೆದ ವರ್ಷ ಅಂದರೆ 2022-23 ನೇ ಸಾಲಿನಲ್ಲಿ ಮಂಡಳಿಯು ವಿದ್ಯಾರ್ಥಿವೇತನಕ್ಕಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಯನ್ನು ಆಹ್ವಾನಿಸ್ಸಿತ್ತು, ಆದರೆ ಈ ವರ್ಷ SSP ಪೋರ್ಟಲ್ನಲ್ಲಿ 2023-24 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕಾಗಿ ( Labour card Scholarship ) ಅರ್ಜಿಯನ್ನು ಪ್ರಾರಂಭಿಸಲಾಗಿದೆ.
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (State Scholarship Portal ) ನಲ್ಲಿ ಪ್ರತಿವರ್ಷ ಅರ್ಜಿ ಸಲ್ಲಿಸುವ ಹಾಗೆಯೇ ಈ ವರ್ಷವೂ ಸಲ್ಲಿಸುವುದು ಈ ವರ್ಷ ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿಯ ಸದಸ್ಯತ್ವ ಪಡೆದ ಕಾರ್ಮಿಕರ ಮಕ್ಕಳೇ? ಎಂಬ ಪ್ರಶ್ನೆ ಕೇಳುತ್ತಾರೆ, ನಿಮ್ಮ ತಂದೆ ಅಥವಾ ತಾಯಿ ಕಾರ್ಮಿಕ ಮಂಡಳಿಯ ಕಾರ್ಡ್ ಹೊಂದಿದ್ದಲ್ಲಿ’ yes ‘ಎಂದು ಉತ್ತರಿಬೇಕು, ಇಲ್ಲವಾದಲ್ಲಿ ‘No ‘ಎಂದು ಉತ್ತರಿಸಬೇಕು.
ವಿದ್ಯಾರ್ಥಿವೇತನದ(Scholarship )ಷರತ್ತುಗಳು
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ನೋಂದಾಯಿತನಾಗಿರಬೇಕು.
- ಕಾರ್ಮಿಕರ ಇಬ್ಬರು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು.
- ಅರ್ಜಿ ಸಲ್ಲಿಸುವಾಗ labour card ಮಾನ್ಯವಾಗಿರಬೇಕು.
- ಈ ವರ್ಷ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಉತ್ತಿರ್ಣನಾಗಿರಬೇಕು.
- 2023-24 ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಯು ದಾಖಲಾಗಿರಬೇಕು.
- ಕರ್ನಾಟಕ ರಾಜ್ಯದಲ್ಲಿ ಭೌತಿಕವಾಗಿ ಆರಂಭವಾಗಿರುವ ಹಾಗೂ ಸರ್ಕಾರದಿಂದ ನೋಂದಾಯಿತ ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಗಳ 02 ಮಕ್ಕಳಿಗೆ ಮಾತ್ರ ಶೈಕ್ಷಣಿಕ ಸಹಾಯಧನವನ್ನು ನೀಡಬಹುದಾಗಿರುತ್ತದೆ.
- ದೂರ ಶಿಕ್ಷಣ, ಆನ್ ಲೈನ್ ಶಿಕ್ಷಣ, ಹೋಂ ಸ್ಟಡಿ, ಇತ್ಯಾದಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಪಡೆಯಲು ಅವಕಾಶ ಇರುವುದಿಲ್ಲ
ವಿದ್ಯಾರ್ಥಿವೇತನದ(Scholarship )ನಿಯಮಗಳು
- SSP ಸ್ಕಾಲರ್ಶಿಪ್ ಅರ್ಜಿಯ ಪರಿಗಣನೆಗಾಗಿ ಕಾರ್ಮಿಕರು ಕಡ್ಡಾಯವಾಗಿ ತಮ್ಮ ಸೇವಾ ಸಿಂಧು ಲೇಬರ್ ಕಾರ್ಡ್ ಅನ್ನು KBOCWWB ಯಲ್ಲಿ 30/06/2024 ರ ಮೊದಲು ಅಪ್ಡೇಟ್ ಮಾಡಿಕೊಳ್ಳಬೇಕು.
- 31/05/2023 ರ ಮೊದಲು ನೋಂದಾಯಿಸಿದ ಲೇಬರ್ ಕಾರ್ಡ್ ವಿದ್ಯಾರ್ಥಿವೇತನವನ್ನು ( Labour card Scholarship ) ಪಡೆಯಲು ಅರ್ಹವಾಗಿದೆ.ನಂತರ ನೋಂದಣಿ ಆಗಿರುವ ಕಾರ್ಡ್ದಾರರು ಸ್ಕಾಲರ್ಷಿಪ್ ಅರ್ಜಿ ಸಲ್ಲಿಕೆ ಮಾಡಿದರು ಪರಿಗಣಿಸಲಾಗುವುದಿಲ್ಲ.
- ನೋಂದಾಯಿತ ಕಾರ್ಮಿಕರ ಬ್ಯಾಂಕ್ ಖಾತೆಯೊಂದಿಗೆ NPCI ಆಧಾರ್ ಮ್ಯಾಪಿಂಗ್ ಆಗಿರಬೇಕು. ಮ್ಯಾಪಿಂಗ್ ಆಗಿಲ್ಲ ಎಂದರೆ ಕಾರ್ಮಿಕರು ಖಾತೆ ಹೊಂದಿರುವ ಬ್ಯಾಂಕ್ಗೆ ಭೇಟಿ ನೀಡಬೇಕು.
- ಹಾಗೂ ಮಂಡಳಿಯಿಂದ ನೀಡಲಾದ ಇತರ ನಿಯಮ ಮತ್ತು ಷರತ್ತುಗಳು.
ಯಾವಾಗ ಅರ್ಜಿ ಸಲ್ಲಿಕೆ ಪ್ರಾರಂಭ?
2023-24 ನೇ ಸಾಲಿನ ಅರ್ಜಿ ಸಲ್ಲಿಕೆಯು ಈಗಾಗಲೇ ಪ್ರಾರಂಭವಾಗಿದೆ. ಈ ವರ್ಷ ಯಾವೆಲ್ಲಾ ವಿದ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ತರಗತಿಗಳಿಗೆ ಪ್ರವೇಶ ಪಡೆದು ಕೊಂಡಿರುವಿರೋ ಅವರು ಈ ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
Labour card scholarship ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
- ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ನಿಮ್ಮ ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದೇ ನಮೂಡಿಸುವುದು.
- ಸುಳ್ಳು ಮಾಹಿತಿಯನ್ನು ನೀಡಬಾರದು.
- ನಿಮ್ಮ ಎಲ್ಲಾ ದಾಖಲಾತಿ (Documents ) ಮಾನ್ಯವಾಗಿತ್ತುಕೊಂಡು ಅರ್ಜಿ ಸಲ್ಲಿಸುವುದು, ಉದಾಹರಣೆಗೆ ನಿಮ್ಮ ಕಾರ್ಮಿಕರ ಕಾರ್ಡ್ ಮಾನ್ಯವಾದ ಅವಧಿ ಮುಕ್ತಾಯಗೊಂಡಿರಬಹುದು ನೋಡಿಕೊಂಡು ಅರ್ಜಿ ಸಲ್ಲಿಸುವುದು.
- ಒಂದು ವೇಳೆ ವ್ಯಾಲಿಡಿಟಿ ಮುಕ್ತಾಯಗೊಂಡಿದ್ದಲ್ಲಿ, ನಿಮ್ಮ ಕಾರ್ಡ್ ಮಾನ್ಯ ಮಾಡಿಸಿಕೊಂಡು ನಂತರ scholarship ಗೆ ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ
ಎಸ್ಎಸ್ಪಿಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/05/2024 ಆಗಿರುತ್ತದೆ, ವಿದ್ಯಾರ್ಥಿಯು 2023-24 ರ ಸಾಲಿನ ವಿದ್ಯಾರ್ಥಿವೇತನಕ್ಕೆ SSP ಮೂಲಕ ಇತರ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೆ ಅವರು ಮತ್ತೆ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.
ಈಗಾಗಲೇ ಹೇಳಿರುವ ಹಾಗೆ SSP ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ 31/05/2024 ಆದರೆ ನಿಮ್ಮ ಲೇಬರ್ ಕಾರ್ಡ್ ಅನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಹೊಸ ವೆಬ್ಸೈಟ್ ( KBOCWWB ) ಯಲ್ಲಿ ದಿನಾಂಕ 30/06/2024 ರ ಒಳಗಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕು.
ಯಾವ ತರಗತಿಯವರಿಗೆ ಎಷ್ಟು ಹಣ ಬರುತ್ತದೆ?
ವಿದ್ಯಾಭ್ಯಾಸದ ವಿವರ (ತರಗತಿ ಅಥವಾ ಕೋರ್ಸ್ ) | ವಾರ್ಷಿಕ ಶೈಕ್ಷಣಿಕ ಧನ ಸಹಾಯ (ರೂ.. ಗಳಲ್ಲಿ ) |
1 ನೇ ತರಗತಿ ಇಂದ 5ನೇ ತರಗತಿ ಯಲ್ಲಿ ಓದುತ್ತಿರುವ ಮಕ್ಕಳಿಗೆ | 1800 |
6ನೇ ತರಗತಿಯಿಂದ 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ | 2400 |
9ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ | 3000 |
ಪ್ರಥಮ ಪಿ. ಯು ಸಿ ಮತ್ತು ದ್ವಿತೀಯ ಪಿ. ಯು ಸಿ ಓದುತ್ತಿರುವ ಮಕ್ಕಳಿಗೆ | 4600 |
ಪದವಿ (ಗರಿಷ್ಠ ಮೂರು ವರ್ಷ )ಓದುತ್ತಿರುವ ಮಕ್ಕಳಿಗೆ | 10000 |
ಬಿ ಇ /ಬಿ ಟೆಕ್ ಅಥವಾ ತತ್ಸಮಾನ ತಾಂತ್ರಿಕ ಪದವಿ ಓದುತ್ತಿರುವ ಮಕ್ಕಳಿಗೆ | 10000 |
ಸ್ನಾತಕೋತ್ತರ ಪದವಿ (ಗರಿಷ್ಠ ಎರಡು ವರ್ಷ ) ಓದುತ್ತಿರುವ ಮಕ್ಕಳಿಗೆ | 10000 |
ಪಾಲಿಟೆಕ್ನಿಕ್ ಅಥವಾ ಡಿಪ್ಲೋಮ ಅಥವಾ ಐ ಟಿ ಐ ಓದುತ್ತಿರುವ ಮಕ್ಕಳಿಗೆ | 4500 |
ಬಿ ಎಸ್ಸಿ ನರ್ಸಿಂಗ್ / ಜಿ ಎನ್ ಎಂ / ಪ್ಯಾರ ಮೆಡಿಕಲ್ ಕೋರ್ಸ್ ಓದುತ್ತಿರುವ ಮಕ್ಕಳಿಗೆ | 10000 |
ಬಿ ಎಡ್ ಓದುತ್ತಿರುವ ಮಕ್ಕಳಿಗೆ | 6000 |
ವೈದ್ಯಕೀಯ ಕೋರ್ಸ್ ಓದುತ್ತಿರುವ ಮಕ್ಕಳಿಗೆ | 11000 |
ಎಲ್ ಎಲ್ ಬಿ /ಎಲ್ ಎಲ್ ಎಂ ಓದುತ್ತಿರುವ ಮಕ್ಕಳಿಗೆ | 10000 |
ಎಂ ಇ /ಎಂ ಟೆಕ್ (ಗರಿಷ್ಠ ಎರಡು ವರ್ಷ )ಓದುತ್ತಿರುವ ಮಕ್ಕಳಿಗೆ | 10000 |
ಎಂ ಡಿ ಮೆಡಿಕಲ್ ಓದುತ್ತಿರುವ ಮಕ್ಕಳಿಗೆ | 12000 |
ಪಿ ಹೆಚ್ ಡಿ /ಎಂ ಫಿಲ್ (ಗರಿಷ್ಠ ಮೂರು ವರ್ಷ ) | 11000 |
SSP ತಂತ್ರಾಂಶ ಅಥವಾ Labour card Scholarship ಬಗ್ಗೆ ಹೆಚ್ಚಿನ ಮಾಹಿತಿಗೆ
- SSP ಯಲ್ಲಿನ ಯಾವುದೇ ತಾಂತ್ರಿಕ/ಇತರೆ ಸಹಾಯಕ್ಕಾಗಿ SSP ಸಹಾಯವಾಣಿ ಸಂಖ್ಯೆ: 1902 ಅನ್ನು ಸಂಪರ್ಕಿಸಬಹುದು.
- Labour Card Scholarship ಗೆ ಸಂಬಂಧಿಸಿದ ಸಹಾಯಕ್ಕಾಗಿ ಹತ್ತಿರದ Labour office ಅಥವಾ ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಿ.
ಇದನ್ನೂ ಓದಿ :- Post Office – ಈ 08 ಸ್ಕೀಮ್ ಗಳ ಬಗ್ಗೆ ಗೊತ್ತಿರಲೇ ಬೇಕು.
ಇದನ್ನೂ ನೋಡಿ :-